ಪ್ರವಾಸ ಮಾಡುವುದು ಎಲ್ಲರ ಕನಸು. ಆದರೆ ಎಲ್ಲರಿಗೂ ಪ್ರಯಾಣ ಆಹ್ಲಾದಕರವಾಗಿರುವುದಿಲ್ಲ. ಕಾರು ಅಥವಾ ಬಸ್ ಹತ್ತಿದ್ರೆ ಸಾಕು ಕೆಲವರಿಗೆ ವಾಂತಿ ಮತ್ತು ತಲೆತಿರುಗುವಿಕೆ ಶುರುವಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು ಕೆಲವು ವಸ್ತುಗಳನ್ನು ಬ್ಯಾಗ್‌ನಲ್ಲಿ ಇರಿಸಿ. ಇದರಿಂದ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ.
ಕಾರು ಪ್ರಯಾಣದ ವೇಳೆ ನಿಮಗೆ ವಾಕರಿಕೆಯ ಅನುಭವವಾಗುತ್ತಿದ್ದರೆ ಬಾಳೆಹಣ್ಣು ತಿನ್ನಿರಿ. ಅದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಿರಿ. ಬಾಳೆಹಣ್ಣು ತಿನ್ನುವುದರಿಂದ ವಾಂತಿ ಕೂಡ ಆಗುವುದಿಲ್ಲ. ನಿಂಬೆ ಹಣ್ಣನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ನಿಂಬೆ ರಸಕ್ಕೆ ಉದರ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವಿದೆ. ನಿಮಗೆ ಚಡಪಡಿಕೆ ಅನಿಸಿದಾಗಲೆಲ್ಲ ನಿಂಬೆ ರಸವನ್ನು ಉಪ್ಪು ಮತ್ತು ನೀರಿನಲ್ಲಿ ಬೆರೆಸಿ ಕುಡಿಯಿರಿ, ಅದು ತ್ವರಿತ ಪರಿಹಾರವನ್ನು ನೀಡುತ್ತದೆ.
ಪ್ರಯಾಣದ ಸಮಯದಲ್ಲಿ ಶುಂಠಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದು ವಾಂತಿ ಮತ್ತು ವಾಕರಿಕೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಶುಂಠಿ ಕ್ಯಾಂಡಿ, ಶುಂಠಿ ಚಹಾ ಇವನ್ನೆಲ್ಲ ಸೇವಿಸಬಹುದು. ಶುಂಠಿ ಪುಡಿಯನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿದರೆ ಹೊಟ್ಟೆಯ ಉರಿ ಕಡಿಮೆಯಾಗುತ್ತದೆ.
ವಿಶೇಷವಾಗಿ ಬೇಸಿಗೆಯಲ್ಲಿ ಅನೇಕರು ಪ್ರಯಾಣದ ವೇಳೆ ತೊಂದರೆಗೊಳಗಾಗುತ್ತಾರೆ. ಪುದೀನ ಎಲೆಗಳು, ಪುದೀನ ಮಾತ್ರೆಗಳು ಅಥವಾ ಪುದೀನಾ ಸಿರಪ್ ಅನ್ನು ಜೊತೆಗೆ ಕೊಂಡೊಯ್ಯಬೇಕು. ಹೊಟ್ಟೆ ತೊಳಸಿದಂತೆ, ವಾಂತಿ ಬಂದಂತೆ ಅನಿಸಿದರೆ ಆ ಸಿರಪ್ ಅನ್ನು ಕುಡಿಯಿರಿ.