
ವೃದ್ಧ ಮಾವುತರೊಬ್ಬರು ಬಾಹುಬಲಿ ಶೈಲಿಯಲ್ಲಿ ಆನೆಯ ಮೇಲೆ ಹತ್ತಿ ಕುಳಿತಿದ್ದಾರೆ. ರಸ್ತೆಯ ಮೇಲೆ ನಿಂತಿದ್ದಾಗ ಆನೆಯ ಸೊಂಡಿಲಿನ ಮೇಲೆ ಹತ್ತಿದ ಮಾವುತ, ಅದರ ಬೆನ್ನಿಗೆ ಏರಿದ್ದಾರೆ. ಆನೆಯು ಕೂಡ ಮಾವುತನನ್ನು ತನ್ನ ಬೆನ್ನ ಮೇಲೆ ಕೂರಿಸುವ ಸಲುವಾಗಿ, ಸೊಂಡಿಲನ್ನು ಮನೋಹರವಾಗಿ ಕೆಳಗಿಳಿಸಿದೆ. ನಂತರ ಆತನನ್ನು ತನ್ನ ಮೇಲೆ ಏರಲು ಸಹಾಯ ಮಾಡುತ್ತದೆ. ಗಜರಾಜನ ಬೆನ್ನ ಮೇಲೆ ಮಾವುತ ಕೂತ ಬಳಿಕ ಸವಾರಿ ಮಾಡಿದ್ದಾರೆ. ಇದು ಆನೆ ಹಾಗೂ ಮಾವುತನ ನಡುವಿನ ಸುಂದರ ಬಾಂಧವ್ಯವಾಗಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಹುಬಲಿ-2 ಸಿನಿಮಾದಲ್ಲಿ ಪ್ರಭಾಸ್ ಮಾಡಿದಂತೆ ಅವರು ಮಾಡಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾವಿರಾರು ವೀಕ್ಷಣೆಗಳೊಂದಿಗೆ ಜನಪ್ರಿಯತೆ ಗಳಿಸಿದೆ. ಕೆಲವರು ಅವರನ್ನು ರಿಯಲ್ ಬಾಹುಬಲಿ ಎಂದು ಕರೆದಿದ್ದಾರೆ. ಮನುಷ್ಯ-ಪ್ರಾಣಿ ಸಂಘರ್ಷದ ಸುದ್ದಿಗಳ ನಡುವೆ, ಈ ರೀತಿಯ ಆಳವಾದ ಮಾನವ-ಪ್ರಾಣಿಯ ನಡುವಿನ ಬಂಧವನ್ನು ವೀಕ್ಷಿಸುವುದು ಬಹಳ ಸುಂದರವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.