ನಟ ಕಮಲ್ ಹಾಸನ್ ಸದ್ಯ ಶಂಕರ್ ಅವರ ‘ಇಂಡಿಯನ್ 2’ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರಭಾಸ್ ಹೀರೋ ಆಗಿ ಅಭಿನಯಿಸುತ್ತಿರುವ ಚಿತ್ರವೊಂದರಲ್ಲಿ ವಿಲನ್ ರೋಲ್‌ಗಾಗಿ ಕಮನ್ ಹಾಸನ್‌ಗೆ ಆಫರ್ ಬಂದಿದೆ. ನಿರ್ಮಾಪಕರು ಪ್ರಸ್ತುತ ಕಮಲ್ ಹಾಸನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಈ ಪ್ರಾಜೆಕ್ಟ್‌ಗೆ ಅವರಿನ್ನೂ ಸೈನ್ ಮಾಡಿಲ್ಲ. ಪ್ರಭಾಸ್ ಅಭಿನಯದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಶ್ವಿನಿ ದತ್ ಈ ಚಿತ್ರದ ನಿರ್ಮಾಪಕರು. ವಿಲನ್ ರೋಲ್‌ಗಾಗಿ ಕಮಲ್ ಹಾಸನ್ ಅವರಿಗೆ 150 ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಆಫರ್ ನೀಡಲಾಗಿದೆ ಅನ್ನೋ ಸುದ್ದಿ ಕೂಡ ಕೇಳಿಬಂದಿತ್ತು. ಆದರೆ ಮೂಲಗಳ ಪ್ರಕಾರ ಈ ಪಾತ್ರಕ್ಕಾಗಿ ಕಮಲ್ ಹಾಸನ್ಗೆ 150 ಕೋಟಿ ರೂಪಾಯಿ ಆಫರ್ ಮಾಡಿಲ್ಲ ಎನ್ನಲಾಗ್ತಿದೆ. ಆದರೆ ಕಮಲ್ ಹಾಸನ್‌ಗೆ ಆಫರ್ ಮಾಡಿರೋ ಮೊತ್ತ ಎಷ್ಟು ಅನ್ನೋದು ಖಚಿತವಾಗಿಲ್ಲ.
ಈ ಪ್ರಾಜೆಕ್ಟ್ ಅನ್ನು ಅವರು ಒಪ್ತಾರೋ ಇಲ್ಲವೋ ಅನ್ನೋದು ಕೂಡ ದೃಢಪಟ್ಟಿಲ್ಲ. ಪ್ರಭಾಸ್ ಅಭಿನಯದ ಈ ಸಿನೆಮಾದ ಚಿತ್ರೀಕರಣ ಶೇ.70ರಷ್ಟು ಪೂರ್ಣಗೊಂಡಿದೆ. ಇದೊಂದು ವೈಜ್ಞಾನಿಕ ಕಾಲ್ಪನಿಕ ಚಿತ್ರ. ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚಿದೆ. ಗ್ರಾಫಿಕ್ಸ್ ಕೆಲಸ ಕಳೆದ 5 ತಿಂಗಳುಗಳಿಂದ ನಡೆಯುತ್ತಿದೆ. ಮುಂದಿನ ವರ್ಷ ಸಿನೆಮಾ ತೆರೆಗೆ ಬರಬಹುದು.