alex Certify ಪ್ರಪಂಚದ ಈ 5 ಸ್ಥಳಗಳಲ್ಲಿದ್ದಾರೆ ದೀರ್ಘಾಯುಷಿಗಳು….! ಇಲ್ಲಿದೆ ಅದರ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪಂಚದ ಈ 5 ಸ್ಥಳಗಳಲ್ಲಿದ್ದಾರೆ ದೀರ್ಘಾಯುಷಿಗಳು….! ಇಲ್ಲಿದೆ ಅದರ ರಹಸ್ಯ

ಜಗತ್ತಿನಲ್ಲಿ ಎಷ್ಟೋ ಮಂದಿ ಶತಾಯುಷಿಗಳ ಬಗ್ಗೆ ನೀವೂ ಕೇಳಿರ್ತೀರಾ. ಹಲವರು 125 ವರ್ಷಗಳವರೆಗೂ ಬದುಕಿದ್ದ ಉದಾಹರಣೆಗಳಿವೆ. ಅತಿ ಹೆಚ್ಚು ದೀರ್ಘಾಯುಷಿಗಳಿರೋದು ಎಲ್ಲಿ? 100 ವರ್ಷಗಳಿಗಿಂತಲೂ ಹೆಚ್ಚು ಕಾಲ ಜನರು ಬದುಕಿರೋದು ಯಾವ್ಯಾವ ಸ್ಥಳಗಳಲ್ಲಿ? ಯಾವ ಕಾರಣಕ್ಕೆ ಅನ್ನೋದನ್ನು ನೋಡೋಣ.

ಗ್ರೀಸ್‌ನ ಇಕಾರಿಯಾ ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ವಾಸಿಸುವ ಅಂತಹ ಸ್ಥಳಗಳನ್ನು ‘ಬ್ಲೂ ಝೋನ್‌ ಅಥವಾ ನೀಲಿ ವಲಯಗಳು’ ಎಂದು ಕರೆಯಲಾಗುತ್ತದೆ. ಸಾಮಾನ್ಯ ಮನುಷ್ಯನ ಸರಾಸರಿ ಜೀವಿತಾವಧಿಗೂ ಇಲ್ಲಿ ವಾಸಿಸುವ ಜನರ ಸರಾಸರಿ ಜೀವಿತಾವಧಿಗೂ ಬಹಳ ವ್ಯತ್ಯಾಸವಿದೆ. ನೀಲಿ ವಲಯಗಳಲ್ಲಿ ವಾಸಿಸುವ ಜನರು ಸರಾಸರಿ 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ.

ಇಟಲಿಯಲ್ಲಿರುವ ಸಾರ್ಡಿನಿಯಾದ ಜನರು ಕೂಡ ದೀರ್ಘಾಯುಷಿಗಳೇ. ವಿಜ್ಞಾನಿಗಳ ಪ್ರಕಾರ ಈ ಸ್ಥಳಗಳಲ್ಲಿ ವಾಸಿಸುವ ಜನರ ಆಹಾರ ಮತ್ತು ಜೀವನಶೈಲಿ ಅದ್ಭುತವಾಗಿದೆ. ಇದೇ ಕಾರಣಕ್ಕೆ ಅವರು ಬಹಳ ವರ್ಷಗಳ ಕಾಲ ಆರೋಗ್ಯವಾಗಿ ಬದುಕಿರುತ್ತಾರೆ.

ಜಪಾನ್‌ನ ಓಕಿನಾವಾದಲ್ಲಿ ವಾಸಿಸುವ ಜನರು ಆರೋಗ್ಯಕರ ದಿನಚರಿಯನ್ನು ಅನುಸರಿಸುವ ಮೂಲಕ ತಮ್ಮ ಜೀವಿತಾವಧಿಯನ್ನು ಹೆಚ್ಚಿಸಲು ಸಮರ್ಥರಾಗಿದ್ದಾರೆ. ಅವರ ಜೀವನ ಶೈಲಿಯನ್ನು ಅನುಸರಿಸಿದ್ರೆ ಎಲ್ಲರೂ ದೀರ್ಘಾಯುಷ್ಯ ಹೊಂದಲು ಸಹಕಾರಿಯಾಗಬಹುದು.

ಕ್ಯಾಲಿಫೋರ್ನಿಯಾದಲ್ಲಿರುವ ಲೋಮಾ ಲಿಂಡಾದ ಜನರು ಸಹ 100 ವರ್ಷಗಳಿಗಿಂತ ಹೆಚ್ಚು ಬದುಕುತ್ತಾರೆ. ಈ ಸ್ಥಳಗಳಲ್ಲಿ ಒಂದು ವಿಷಯ ಸಾಮಾನ್ಯವಾಗಿದೆ. ಇಲ್ಲಿ ವಾಸಿಸುವ ಜನರಲ್ಲಿ ಶೇ.95ಕ್ಕಿಂತ ಹೆಚ್ಚು ಜನರು ಸಸ್ಯಾಹಾರವನ್ನೇ ಸೇವಿಸುತ್ತಾರೆ. ಅಷ್ಟೇ ಅಲ್ಲ ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ.

ಬ್ಲೂ ಝೋನ್‌ಗಳ ಪಟ್ಟಿಯಲ್ಲಿ ಕೋಸ್ಟರಿಕಾದ ನಿಕೋಯಾ ಕೂಡ ಸೇರಿದೆ. ಇಲ್ಲಿನ ಜನರಿಗೆ ಜಿಮ್‌ ಮೇಲೆ ಹೆಚ್ಚು ವಿಶ್ವಾಸವಿಲ್ಲ, ಆದ್ರೆ ವಾಕಿಂಗ್‌ ಮಾಡುವುದನ್ನು ಇವರು ರೂಢಿಸಿಕೊಂಡಿದ್ದಾರೆ. ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ, ಆಹಾರದಲ್ಲಿ ಹೆಚ್ಚು ಹೆಚ್ಚು ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಇತರ ಧಾನ್ಯಗಳನ್ನು ಸೇವಿಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...