ಬೆಳೆ ಹಾನಿಯಾದ ವೇಳೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಕುರಿತಂತೆ ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ.
ಪ್ರಸಕ್ತ ಸಾಲಿನ ‘ಪ್ರಧಾನ ಮಂತ್ರಿ ಫಸಲ್ ಬಿಮಾ’ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಲು ಜುಲೈ 31 ಅಂತಿಮ ದಿನಾಂಕವಾಗಿದ್ದು, ರೈತರು ಬ್ಯಾಂಕ್ ಶಾಖೆ/ವಿಮಾ ಸಂಸ್ಥೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಾತ್ಸಲ್ಯ ಯೋಜನೆ ಅನುಷ್ಠಾನ
ನೊಂದಣಿಗೊಂಡ ರೈತರ ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆಯಬಹುದಾಗಿದೆ. ಬಿತ್ತನೆ ವಿಫಲಗೊಂಡಲ್ಲಿ, ಹಾಲಿ ಇರುವ ಬೆಳೆ ಹಾನಿಯಾದಲ್ಲಿ, ಕೊಯ್ಲೋತ್ತರ ನಂತರದ ನಷ್ಟ, ಸ್ಥಳೀಯ ವಿಪತ್ತುಗಳು ಸಂಭವಿಸಿದ ವೇಳೆ ಯೋಜನೆಯಡಿ ಪರಿಹಾರ ನೀಡಲಾಗುತ್ತದೆ