ಸೆಪ್ಟೆಂಬರ್‌ನಲ್ಲಿ ಬ್ರಿಟನ್ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ರೂ ಬೋರಿಸ್ ಜಾನ್ಸನ್ ಸುಮ್ಮನೇ ಕಾಲಹರಣ ಮಾಡುತ್ತಿಲ್ಲ. ಕೇವಲ ಭಾಷಣ ಮಾಡುವ ಮೂಲಕ 1 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ಹಣ ಗಳಿಸಿದ್ದಾರೆ.
ಬೋರಿಸ್ ಜಾನ್ಸನ್, ನವೆಂಬರ್‌ನಲ್ಲಿ ಮಾಡಿದ ಮೂರು ಭಾಷಣಗಳಿಗಾಗಿ 750,000 ಪೌಂಡ್‌ಗಳಿಗಿಂತ್ಲೂ ಹೆಚ್ಚಿನ ಶುಲ್ಕ ಸಂಗ್ರಹವಾಗಿದೆ. ಅಕ್ಟೋಬರ್‌ನಲ್ಲಿ ಕೌನ್ಸಿಲ್ ಆಫ್ ಇನ್ಶೂರೆನ್ಸ್ ಏಜೆಂಟ್ಸ್ ಮತ್ತು ಬ್ರೋಕರ್ಸ್‌ಗೆ ನೀಡಿದ ಭಾಷಣಕ್ಕಾಗಿ ಜಾನ್ಸನ್‌ಗೆ 276,000 ಪೌಂಡ್ ಹಣವನ್ನು ಪಾವತಿಸಲಾಗಿದೆ.
ಮಾಹಿತಿ ಪ್ರಕಾರ ಎರಡು ತಿಂಗಳಲ್ಲಿ ಮಾಜಿ ಪ್ರಧಾನಿ ತಮ್ಮ ಭಾಷಣಗಳಿಂದಲೇ ಒಟ್ಟು 1,030,780 ಪೌಂಡ್ ಗಳಿಸಿದ್ದಾರೆ. ಅಂದರೆ ಅಂದಾಜು 10 ಲಕ್ಷ ರೂಪಾಯಿ. ಬೋರಿಸ್ ಜಾನ್ಸನ್ ಅವರು ಸೆಂಟರ್‌ವ್ಯೂ ಪಾರ್ಟ್‌ನರ್ಸ್, ನ್ಯೂಯಾರ್ಕ್ ಮೂಲದ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆಯಿಂದ ನವೆಂಬರ್ 9 ರಂದು ಭಾಷಣಕ್ಕಾಗಿ 277,723 ಹಣ ಪಡೆದಿದ್ದಾರಂತೆ. ಅವರ ಶುಲ್ಕ ಸದ್ಯ ಗಂಟೆಗೆ 31,000 ಪೌಂಡ್‌ನಷ್ಟಾಗಿದೆ. ನವೆಂಬರ್ 17 ರಂದು ʼದಿ ಹಿಂದೂಸ್ತಾನ್ ಟೈಮ್ಸ್ʼ ನಿಂದ 261,652 ಪೌಂಡ್ ಪಾವತಿಯಾಗಿದ್ರೆ, ನವೆಂಬರ್ 23 ರಂದು ಟೆಲಿವಿಸಾವೊ ಇಂಡಿಪೆಂಡೆಂಟ್‌ನಿಂದ ಲಿಸ್ಬನ್‌ನಲ್ಲಿ CNN ಗ್ಲೋಬಲ್ ಶೃಂಗಸಭೆಯಲ್ಲಿ ಮಾತನಾಡಲು 215,275 ಪೌಂಡ್ ಹಣವನ್ನು ನೀಡಲಾಗಿತ್ತು.
ಬೋರಿಸ್ ಜಾನ್ಸನ್ ಮತ್ತವರ ಕುಟುಂಬ ಕನ್ಸರ್ವೇಟಿವ್ ದಾನಿಗಳಿಂದ ತಿಂಗಳಿಗೆ 3,500 ಪೌಂಡ್ ವಸತಿ ಭತ್ಯೆಯನ್ನು ಪಡೆಯುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಹಲವು ವರ್ಷಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಬೋರಿಸ್ ಜಾನ್ಸರ್, ವಾಕ್ ಚತುರತೆ ಗಳಿಸಿದ್ದಾರೆ. ತಮ್ಮ ನಿರಾಯಾಸ ಮಾತುಗಳು, ಅದ್ಭುತ ಭಾಷಣದ ಮೂಲಕವೇ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.