alex Certify ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ವಂಚನೆ…! ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ವಂಚನೆ…! ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಕಲಿ ಚಾರಿಟೇಬಲ್​ ಟ್ರಸ್ಟ್​ ಸೃಷ್ಟಿಸಿದ ಆರೋಪದ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಇಬ್ಬರು ಆರೋಪಿಗಳಿಗೆ ದೆಹಲಿ ನ್ಯಾಯಾಲಯವು ವಂಚಿಸಿದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಪವನ್​ ಕುಮಾರ್,​ ಭಾರತೀಯ ದಂಡ ಸಂಹಿತೆ ಸೆಕ್ಷನ್​ 420, 120 ಬಿ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಇಬ್ಬರು ಆರೋಪಿಗಳಾದ ಅತುಲ್​ ಕುಮಾರ್​ ಹಾಗೂ ಜಗಮೋಹನ್​​ರನ್ನು ದೋಷಿಗಳೆಂದು ತೀರ್ಪು ನೀಡಿದ್ದಾರೆ.

ಅಪರಾಧಿಗಳು ಮೋಸದಿಂದ ಮತ್ತು ಅಪ್ರಾಮಾಣಿಕವಾಗಿ ವೆಬ್‌ಸೈಟ್ ರಚಿಸಿದ್ದಾರೆ ಮತ್ತು ನರೇಂದ್ರ ಮೋದಿ ಕಂಪ್ಯೂಟರ್​ ಸಾಕ್ಷಾರ್ಥ ಮಿಷನ್​ ಹೆಸರಿನಲ್ಲಿ ನಕಲಿ ಚಾರಿಟೇಬಲ್​ ಟ್ರಸ್ಟ್​​ ನಲ್ಲಿ ನೋಂದಾಯಿಸಿದ್ದಾರೆ ಎಂದು ಪ್ರಾಸಿಕ್ಯೂಷನ್​ ವಾದಿಸಿತ್ತು.

ಆದ್ದರಿಂದ ಪ್ರಧಾನಿ ಮೋದಿ ಹೆಸರು ಹಾಗೂ ಫೋಟೋ ಬಳಸಿಕೊಂಡು ದೇಶಾದ್ಯಂತ ವಿವಿಧ ಕೇಂದ್ರಗಳಿಂದ ಹಣ ಗಳಿಸಿದ್ದಾರೆಂದು ಪ್ರಾಸಿಕ್ಯೂಟರ್​ ಹೇಳಿದ್ದರು.

ವಾದ – ವಿವಾದಗಳನ್ನು ಆಲಿಸಿದ ಕೋರ್ಟ್, ಕಂಪ್ಯೂಟರ್​ ತರಬೇತಿ ಕಾರ್ಯಕ್ರಮಕ್ಕಾಗಿ 25,599 ರೂಪಾಯಿಗಳನ್ನು ಪಾವತಿಸಿದ ಏಳು ಮಂದಿಗೆ ಪರಿಹಾರ ನೀಡಬೇಕು ಎಂದು ಹೇಳಿದೆ. ಅಪರಾಧಿಗಳಿಗೆ ಪ್ರಾಸಿಕ್ಯೂಷನ್​ ವೆಚ್ಚವಾಗಿ 50 ಸಾವಿರ ರೂಪಾಯಿಗಳನ್ನು ನೀಡುವಂತೆಯೂ ಆದೇಶ ನೀಡಿದೆ. ಈ ಪ್ರಕರಣ ಇತರೆ ಸಂತ್ರಸ್ತರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂಬುದನ್ನೂ ಕೋರ್ಟ್​ ಗಮನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...