ಪ್ರಧಾನಿ ಮೋದಿ ಅವರ ಸಲಹೆ ಬೆನ್ನಲ್ಲೇ ಈ ಕೆಲಸ ಆರಂಭಿಸಿದ RJD ನಾಯಕ್ ತೇಜಸ್ವಿ ಯಾದವ್ 18-07-2022 8:12AM IST / No Comments / Posted In: Latest News, India, Live News ಪ್ರಧಾನಿ ನರೇಂದ್ರ ಮೋದಿಯವರು, ಜುಲೈ 12ರಂದು ಬಿಹಾರಕ್ಕೆ ಭೇಟಿ ನೀಡಿದ್ದ ವೇಳೆ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರಿಗೆ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಇದೀಗ ತೇಜಸ್ವಿ ಯಾದವ್ ಈ ಸಲಹೆಯನ್ನು ಪಾಲಿಸಲು ಮುಂದಾದಂತೆ ಕಾಣುತ್ತಿದೆ. ವಾರದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯನ್ನು ತೇಜಸ್ವಿ ಯಾದವ್ ಅನುಷ್ಠಾನಗೊಳಿಸಿದ್ದು, ಇದಕ್ಕೆ ಉದಾಹರಣೆ ಎಂಬಂತೆ ತಮ್ಮ ನಿವಾಸದ ಮುಂದೆ ಭರ್ಜರಿಯಾಗಿ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಅವರು ಬೆವರಿಳಿಸಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಿದ ತೇಜಸ್ವಿ ಯಾದವ್ ಅವರಿಗೆ ಕಾರು ಚಾಲಕ, ಅಡುಗೆ ಕೆಲಸಗಾರ ಮೊದಲಾದವರು ಸಾಥ್ ನೀಡಿದ್ದಾರೆ. ತಾವು ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಹಾಕಿಕೊಂಡಿರುವ ತೇಜಸ್ವಿ ಯಾದವ್ ಜೀವನವಿರಲಿ ಅಥವಾ ಆಟವಿರಲಿ ಗೆಲುವಿಗಾಗಿ ಹೋರಾಟ ಎಂದು ಬರೆದುಕೊಂಡಿದ್ದಾರೆ. Life or game, one should always play to win. The more you plan in head, the more you perform on field. Pleasure to try hands on bat & ball after ages. It becomes more satisfying when driver, cook, sweeper, gardener & care takers are your playmates and keen to hit & bowl you out. pic.twitter.com/ChvK9evzi2 — Tejashwi Yadav (@yadavtejashwi) July 17, 2022