ಪ್ರಧಾನಿ ನರೇಂದ್ರ ಮೋದಿಯವರು ಜೂನ್ 21 ರಂದು ನಡೆಯಲಿರುವ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿಯವರೊಂದಿಗೆ ಹದಿನೈದು ಸಾವಿರ ಮಂದಿ ಯೋಗ ಮಾಡಲಿದ್ದು, ಅಂದು ಬೆಳಿಗ್ಗೆ 6-30 ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.
ಈ ಸಂದರ್ಭದಲ್ಲಿ ಮುಕ್ಕಾಲು ಗಂಟೆಗಳ ಕಾಲ 21 ಯೋಗದ ಆಸನಗಳನ್ನು ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಇದು ಕಾರ್ಯಕ್ರಮ ಆರಂಭವಾಗುವ ಮುನ್ನ ಅಂದರೆ ಬೆಳಗ್ಗೆ 5.30 ರವರೆಗೆ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಆ ಬಳಿಕ ಅರಮನೆಯ ಎಲ್ಲ ದ್ವಾರಗಳು ಬಂದ್ ಆಗಲಿವೆ.
ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಯೋಗ ದಿನಕ್ಕೂ 72 ಗಂಟೆ ಮುಂಚೆ ಇದನ್ನು ಪಡೆದುಕೊಳ್ಳಬೇಕಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿ ಯೋಗಪಟುವಿಗೆ ಯೋಗ ಮ್ಯಾಟ್, ಶೂ ಇಡಲು ಬಾಕ್ಸ್ ಹಾಗೂ ಮೊಬೈಲ್ ಇಟ್ಟುಕೊಳ್ಳಲು ಪ್ರತ್ಯೇಕ ಕವರನ್ನು ಕೇಂದ್ರದ ಆಯುಷ್ ಇಲಾಖೆ ನೀಡಲಿದೆ.