ನವದೆಹಲಿ: ಸಹೋದರ, ಸಹೋದರಿಯರ ನಡುವಿನ ಬಾಂಧವ್ಯವನ್ನು ಸಾರುವ ಪವಿತ್ರ ಹಬ್ಬ ರಕ್ಷಾಬಂಧನ ಹಿನ್ನೆಲೆಯಲ್ಲಿ ಪುಟ್ಟ ಮಕ್ಕಳು, ಸಹೋದರಿಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುವ ಮೂಲಕ ಗಮನಸೆಳೆದರು.
ನವದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸಕ್ಕೆ ಆಗಮಿಸಿದ ಮಕ್ಕಳು ಪ್ರಧಾನಿ ಮೋದಿಯವರಿಗೆ ರಕ್ಷಾಬಂಧನ ಪವಿತ್ರದಾರವನ್ನು ಕಟ್ಟಿ ಆಶಿರ್ವಾದ ಪಡೆದರು. ಈ ವೇಳೆ ಪ್ರಧಾನಿ ಮೋದಿ ಕೆಲ ಕಾಲ ಮಕ್ಕಳ ಜತೆ ಕಾಲಕಳೆದು ಕುಶಲೋಪರಿ ವಿಚಾರಿಸಿದರು.
ರಕ್ಷಾಬಂಧನ ಹಿನ್ನೆಲೆಯಲ್ಲಿ ಮಕ್ಕಳ ಜತೆ ಕಳೆದ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, A very special Raksha Bandhan with these youngsters…ಎಂದು ಟ್ವೀಟ್ ಮಾಡಿದ್ದಾರೆ.