ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರ ಎರ್ರಿಸ್ವಾಮಿ ವಿರುದ್ಧ ದೂರು ದಾಖಲಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ಎರ್ರಿಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 406ರ ಅಡಿ ಪ್ರಕರಣ ದಾಖಲಾಗಿದೆ.
‘ನಿಗೂಢ ಸನ್ನಿವೇಶದಲ್ಲಿ ನಾನು ಸತ್ತರೆ…….’: ಗೊಂದಲ ಮೂಡಿಸಿದ ಎಲಾನ್ ಮಸ್ಕ್ ಟ್ವೀಟ್
ಕಾಮಗಾರಿ ಬಿಲ್ ಪಾವತಿ ವಿಚಾರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗುತ್ತಿಗೆದಾರ ಎರ್ರಿಸ್ವಾಮಿ, ಪತ್ರದಲ್ಲಿ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು.
ಗುತ್ತಿಗೆದಾರ ಎರ್ರಿಸ್ವಾಮಿ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಬಿಲ್ ಪಾವತಿಯಾಗದ ಕಾರಣ ಪತ್ರ ಬರೆದಿದ್ದರು.