alex Certify ಪ್ರತಿ 11 ನಿಮಿಷಕ್ಕೆ ಓರ್ವ ಯುವತಿ ಅಥವಾ ಮಹಿಳೆ ಆಪ್ತರಿಂದಲೇ ಹತ್ಯೆ: ವಿಶ್ವಸಂಸ್ಥೆಯಿಂದ ಶಾಕಿಂಗ್ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ 11 ನಿಮಿಷಕ್ಕೆ ಓರ್ವ ಯುವತಿ ಅಥವಾ ಮಹಿಳೆ ಆಪ್ತರಿಂದಲೇ ಹತ್ಯೆ: ವಿಶ್ವಸಂಸ್ಥೆಯಿಂದ ಶಾಕಿಂಗ್ ಮಾಹಿತಿ ಬಹಿರಂಗ

ರಾಷ್ಟ್ರ ರಾಜಧಾನಿ ನಹದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಶ್ರದ್ಧಾ ತಾನು ಲಿವ್ ಇನ್ ರಿಲೇಶನ್ ನಲ್ಲಿದ್ದ ಅಫ್ತಾಬ್ ಅಮೀನ್ ಪೂನಾವಾಲ ಎಂಬಾತನಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದು, ಆಕೆಯನ್ನು ಕೊಂದು 35 ತುಂಡುಗಳನ್ನಾಗಿಸಿದ್ದ ಆರೋಪಿ ಬಳಿಕ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ.

ಇದರ ವಿಚಾರಣೆ ಮುಂದುವರೆದಿದ್ದು ಒಂದೊಂದೇ ಬೆಚ್ಚಿ ಬೀಳಿಸುವ ವಿವರಗಳು ಬಹಿರಂಗವಾಗುತ್ತಿರುವುದರ ಮಧ್ಯೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತೊಂದು ಶಾಕಿಂಗ್ ಸಂಗತಿಯನ್ನು ಹೇಳಿದ್ದಾರೆ. ವಿಶ್ವದಲ್ಲಿ ಪ್ರತಿ 11 ನಿಮಿಷಕ್ಕೆ ಓರ್ವ ಯುವತಿ ಅಥವಾ ಮಹಿಳೆ ತನ್ನ ಆಪ್ತರಿಂದಲೇ ಹತ್ಯೆಯಾಗುತ್ತಿದ್ದಾರೆ ಎಂಬ ಕಳವಳಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಪ್ರತಿ ವರ್ಷದ ನವೆಂಬರ್ 25 ರಂದು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ದಿನವನ್ನು ಆಚರಣೆ ಮಾಡುತ್ತಿದ್ದು, ಇದರ ಹಿನ್ನೆಲೆಯಲ್ಲಿ ಮಾತನಾಡಿರುವ ಅಂಟೋನಿಯೊ, ಲೈಂಗಿಕ ದೌರ್ಜನ್ಯ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡುವ ಮೂಲಕವೂ ಮಹಿಳೆಯರು ಮತ್ತು ಯುವತಿಯರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...