ವೇತನದ ಕುರಿತಂತೆ ನಡೆಸಲಾದ ಸಮೀಕ್ಷೆ ಒಂದರಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ವಿಶ್ವದ ಪ್ರತಿ ಮೂರು ಉದ್ಯೋಗಿಗಳ ಪೈಕಿ ಕೇವಲ ಒಬ್ಬರು ಮಾತ್ರ ತಮ್ಮ ವೇತನದ ಕುರಿತು ತೃಪ್ತಿ ಹೊಂದಿದ್ದಾರೆ ಎಂಬ ಸಂಗತಿ ಈ ವೇಳೆ ತಿಳಿದು ಬಂದಿದೆ.
Gartner ಇಂಕ್ ಎಂಬ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದ್ದು, ಶೇಕಡ 32ರಷ್ಟು ಉದ್ಯೋಗಿಗಳು ಮಾತ್ರ ತಮಗೆ ಸಿಗುತ್ತಿರುವ ವೇತನದ ಕುರಿತು ಸಂತಸದಿಂದಿದ್ದಾರೆ ಎನ್ನಲಾಗಿದೆ. ಸಮೀಕ್ಷೆಗಾಗಿ ವಿಶ್ವದ ವಿವಿಧ ಕ್ಷೇತ್ರಗಳಲ್ಲಿನ 3,500 ಉದ್ಯೋಗಿಗಳನ್ನು ಸಂದರ್ಶಿಸಲಾಗಿತ್ತು.
ಸಮೀಕ್ಷೆ ವೇಳೆ ಮತ್ತಷ್ಟು ಕುತೂಹಲಕರ ಸಂಗತಿಗಳು ಸಹ ಬಹಿರಂಗವಾಗಿದ್ದು, ಉದ್ಯೋಗದಾತರು ತಮ್ಮ ಉದ್ಯೋಗಿಗಳ ಕಾರ್ಯಕ್ಷಮತೆ ಕುರಿತು ಸಂಪೂರ್ಣ ವಿಶ್ವಾಸ ಹೊಂದಿಲ್ಲದೆ ಇರುವುದು ಕಂಡು ಬಂದಿದೆ. ಅಲ್ಲದೆ ಉದ್ಯೋಗಿಗಳು ಪ್ರಸ್ತುತ ಉದ್ಯೋಗವನ್ನು ತೊರೆಯುವ ಮುನ್ನ ಹೆಚ್ಚಿನ ವೇತನ ದೊರೆಯುವ ಕಂಪನಿಗೆ ಆದ್ಯತೆ ನೀಡುವುದು ಸಹ ತಿಳಿದುಬಂದಿದೆ.