
ವಾಕಿಂಗ್ ಮಾಡುವುದರಿಂದ ಅನೇಕ ಲಾಭಗಳಿವೆ. ವಾಕಿಂಗ್ ನಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿರುತ್ತದೆ. ಆದ್ರೆ ವ್ಯಕ್ತಿಯೊಬ್ಬ ದಿನದಲ್ಲಿ ಎಷ್ಟು ಸಮಯ ವಾಕಿಂಗ್ ಮಾಡಬೇಕು ಎನ್ನುವುದು ನಿಮಗೆ ಗೊತ್ತಾ?
ಅಧ್ಯಯನವೊಂದರ ಪ್ರಕಾರ, ಒಬ್ಬ ವ್ಯಕ್ತಿ ಪ್ರತಿದಿನ 15 ನಿಮಿಷ ವಾಕಿಂಗ್ ಮಾಡಬೇಕು. ಅಂದ್ರೆ ವಾರಕ್ಕೆ 90 ನಿಮಿಷ ವಾಕಿಂಗ್ ಮಾಡಬೇಕು. ಪ್ರತಿದಿನ 15 ನಿಮಿಷ ನಿಧಾನವಾಗಿ ನಡೆಯುವುದರಿಂದ ಅಕಾಲಿಕ ಮರಣದ ಪ್ರಮಾಣ ಶೇಕಡಾ 14ರಷ್ಟು ಕಡಿಮೆ ಇರುತ್ತದೆಯಂತೆ. ಈ ರೀತಿಯ ಜೀವನ ಶೈಲಿ ಅಳವಡಿಸಿಕೊಂಡವರ ಆಯಸ್ಸು ಮೂರು ವರ್ಷಗಳಷ್ಟು ಹೆಚ್ಚಾಗುತ್ತದೆಯಂತೆ.
ಹಾರ್ಟ್ ಕೇರ್ ಫೌಂಡೇಶನ್ ಆಫ್ ಇಂಡಿಯಾ ಅಧ್ಯಕ್ಷ ಕೆ.ಕೆ. ಅಗರ್ವಾಲ್ ಲಾನ್ಸೆಟ್ ನಲ್ಲಿ ಪ್ರಕಟವಾದ ಅಧ್ಯಯನವೊಂದನ್ನು ಉದಾರಣೆಯಾಗಿ ತೆಗೆದುಕೊಂಡು ಈ ವಿಷಯವನ್ನು ದೃಢಪಡಿಸಿದ್ದಾರೆ. ಪ್ರತಿದಿನ 15 ನಿಮಿಷ ನಡಿಗೆ ಮಾಡುವವರಲ್ಲಿ ಶೇಕಡಾ ಒಂದರಷ್ಟು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.