alex Certify ಪ್ರತಿ ದಿನ ತುಪ್ಪ ಸೇವಿಸಿ ಸದೃಢವಾಗಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ತುಪ್ಪ ಸೇವಿಸಿ ಸದೃಢವಾಗಿರಿ

ಕೆಲವರಿಗೆ ತುಪ್ಪ ಅಂದ್ರೆ ತುಂಬಾ ಇಷ್ಟ. ಮತ್ತೆ ಕೆಲವರಿಗೆ ತುಪ್ಪ ಅಂದ್ರೆ ಆಗುವುದಿಲ್ಲ. ಆದರೆ ತುಪ್ಪ ಪ್ರತಿ ನಿತ್ಯ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆ ಉಪಯೋಗಗಳು ಏನು ಅಂತ ತಿಳಿದುಕೊಳ್ಳಿ.

* ತುಪ್ಪ ಹೆಚ್ಚಿನ ಪ್ರಮಾಣದ ಕ್ಯಾಲೋರಿ, ಪೋಷಕಾಂಶಗಳನ್ನು ಹೊಂದಿದೆ. ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ಹೋರಾಡುವ ಗುಣ ಮತ್ತು ಅಂಟಿ ಆಕ್ಸಿಡೆಂಟ್ ಜೊತೆಗೆ ಕೊಂಚ ಕೊಬ್ಬಿನ ತೈಲವನ್ನು ಹೊಂದಿದೆ.

* ತುಪ್ಪವನ್ನು ಪ್ರತಿ ಊಟದೊಂದಿಗೆ ಚಿಕ್ಕ ಪ್ರಮಾಣದಲ್ಲಿ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ.

* ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ದೃಢಗೊಳ್ಳಲು ನೆರವಾಗುತ್ತದೆ.

* ಇದರ ಸೇವನೆಯಿಂದ ಮಧುಮೇಹ ಮತ್ತು ಹೃದಯದ ರೋಗಗಳನ್ನು ತಡೆಗಟ್ಟಬಹುದು.

* ಮೂಗಿನಲ್ಲಿ ರಕ್ತ ಬರುವ ಕಾಯಿಲೆ ಇರುವವರು ಕರಗಿದ ತುಪ್ಪವನ್ನು ಮೂಗಿನ ಹೊಳ್ಳೆಗಳ ಒಳ ಹಚ್ಚಿದರೆ ರಕ್ತ ಸೋರುವುದು ಕಡಿಮೆಯಾಗುತ್ತವೆ.

* 1 ಚಮಚ ತುಪ್ಪಕ್ಕೆ 5 ಗ್ರಾಂ ಕರಿಮೆಣಸಿನ ಪುಡಿ ಹಾಕಿ ದಿನಕ್ಕೆ 3 ಬಾರಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

* ಚಿಕ್ಕ ಹತ್ತಿ ತುಂಡಿಗೆ ಸ್ವಲ್ಪ ತುಪ್ಪ ಹಾಕಿ, ಹಲ್ಲು ನೋವಿರುವ ಜಾಗಕ್ಕೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ.

* ಇದರ ಸೇವನೆಯಿಂದ ಸ್ಮರಣಶಕ್ತಿ ಮತ್ತು ಬುದ್ದಿ ಮತ್ತೆ ಹೆಚ್ಚಲು ನೆರವಾಗುತ್ತದೆ.

* ರಾತ್ರಿ ಮಲಗುವ ಮುನ್ನ ಬಿಸಿ ಬಿಸಿ ಹಾಲಿಗೆ ಕೊಂಚ ತುಪ್ಪವನ್ನು ಸೇರಿಸಿ ಕುಡಿದರೆ ಉತ್ತಮ ನಿದ್ದೆ ಬರುತ್ತದೆ.

* ತುಪ್ಪದಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು, ಕಣ್ಣುಗಳಿಗೆ ಹಾಗೂ ದೃಷ್ಟಿ ನರಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ.

* ದಿನನಿತ್ಯ ತುಪ್ಪ ಸೇವಿಸಿದರೆ ಕ್ಯಾನ್ಸರ್ ಬರುವ ಪ್ರಮಾಣ ಕಡಿಮೆ ಆಗುತ್ತೆ.

* ಅರ್ಧ ಚಮಚ ಮೆಂತ್ಯೆ ಕಾಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

* ಪುಟ್ಟ ಗಾಯ, ತರಚು ಗಾಯ, ಸುಟ್ಟ ಗಾಯಗಳಿಗೆ ತುಪ್ಪವನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವಾಗಿ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.

* ಇದರ ಸೇವನೆಯಿಂದ ತ್ವಚೆಯ ಕಾಂತಿ ವೃದ್ಧಿಸುತ್ತದೆ.

* ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸಿದರೆ ಹಸಿವು ಹೆಚ್ಚುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

* ಕಾಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿ ಅಥವಾ ರಕ್ತ ನಾಳಗಳ ತಡೆಯಿಂದಾಗುವ ಸಿಡಿತ, ನೋವಿದ್ದರೆ ಕಾಲಿಗೆ ತುಪ್ಪವನ್ನು ಹಚ್ಚಬೇಕು.

* ಹೆರಿಗೆ ನೋವು ಪ್ರಾರಂಭ ಆದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ.

* ಅತಿಯಾದ ಜ್ವರದ ಸಮಯದಲ್ಲಿ ತುಪ್ಪವನ್ನು ಅಂಗೈ, ಪಾದ ಮತ್ತು ಹಣೆಗೆ ಹಚ್ಚಿದರೆ ಜ್ವರ ಬೇಗನೆ ಶಮನವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...