ಅವಲಕ್ಕಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫಿಟ್ ಆಗಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಜೀವಸತ್ವ ಅವಲಕ್ಕಿಯಲ್ಲಿರುತ್ತದೆ. ಅವಲಕ್ಕಿ ಬೇಗ ಜೀರ್ಣವಾಗುವುದ್ರಿಂದ ಬೆಳಿಗ್ಗೆ ಇದನ್ನು ತಿನ್ನಲು ಜನರು ಇಷ್ಟಪಡ್ತಾರೆ.
ನಿಯಮಿತ ರೂಪದಲ್ಲಿ ಒಂದು ಪ್ಲೇಟ್ ಅವಲಕ್ಕಿ ತಿನ್ನುವುದ್ರಿಂದ ಕಬ್ಬಿಣದ ಕೊರತೆ ಎದುರಾಗುವುದಿಲ್ಲ. ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. ಹಿಮೋಗ್ಲೋಬಿನ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಮಧುಮೇಹ ರೋಗಿಗಳಿಗೆ ಅವಲಕ್ಕಿ ಸೇವನೆ ತುಂಬಾ ಪ್ರಯೋಜನಕಾರಿ. ಅವಲಕ್ಕಿ ತಿನ್ನುವುದ್ರಿಂದ ಹಸಿವು ಕಡಿಮೆಯಾಗುತ್ತದೆ ಹಾಗೂ ಬಿಪಿ ಮಟ್ಟ ಸ್ಥಿರವಾಗಿರುತ್ತದೆ. ಒಂದು ಪ್ಲೇಟ್ ಅವಲಕ್ಕಿಯಲ್ಲಿ 224 ಕಿಲೋ ಕ್ಯಾಲೋರಿ ಇರುತ್ತದೆ.
ಮನೆಯಲ್ಲಿ ಸಾಮಾನ್ಯವಾಗಿ ತರಕಾರಿ ಸೇರಿಸಿ ಅವಲಕ್ಕಿ ತಯಾರಿಸಲಾಗುತ್ತದೆ. ಈ ರುಚಿಕರ ಅವಲಕ್ಕಿ ಸೇವನೆಯಿಂದ ದೇಹಕ್ಕೆ ಸಾಕಷ್ಟು ವಿಟಮಿನ್, ಖನಿಜ ಹಾಗೂ ಫೈಬರ್ ಸಿಗುತ್ತದೆ.
ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಡ್ ಇರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿರುವವರು ಅವಲಕ್ಕಿಯನ್ನು ಬೆಳಿಗ್ಗೆ ಸೇವನೆ ಮಾಡಬೇಕು. ಅವಲಕ್ಕಿ ದಿನವಿಡೀ ಉತ್ಸಾಹದಿಂದಿರಲು ಸಹಾಯ ಮಾಡುತ್ತದೆ ಎಂದು ಇತ್ತೀಚಿಗೆ ನಡೆದ ಸಂಶೋಧನೆಯೊಂದು ಹೇಳಿದೆ. ಒಣ ಹಣ್ಣು, ಮೊಟ್ಟೆ ಜತೆ ಅವಲಕ್ಕಿ ಸೇವನೆ ಮಾಡುವುದು ಬಹಳ ಒಳ್ಳೆಯದು.