ಪ್ರಥಮ ಪೂಜ್ಯ ಗಣೇಶನನ್ನು ಎಲ್ಲರೂ ಆರಾಧನೆ ಮಾಡ್ತಾರೆ. ಎಲ್ಲ ಶುಭ ಕಾರ್ಯಗಳು ಗಣೇಶನ ಪೂಜೆ ನಂತ್ರವೇ ಶುರುವಾಗುತ್ತದೆ. ಗಣೇಶನ ಬೇರೆ ಬೇರೆ ರೂಪವನ್ನು ಪೂಜೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ ಕೃಪೆಗೆ ಪಾತ್ರರಾಗಬಹುದು.
ಎಲ್ಲ ಕಷ್ಟಗಳು ದೂರವಾಗಬೇಕೆಂದಾದ್ರೆ ಗಣೇಶನ ಕೆಲ ಮೂರ್ತಿಗಳನ್ನು ಅವಶ್ಯವಾಗಿ ಪೂಜೆ ಮಾಡಬೇಕಾಗುತ್ತದೆ. ಇದ್ರಿಂದ ಲಕ್ಷ್ಮಿ ಪ್ರಸನ್ನಳಾಗುವ ಜೊತೆಗೆ ಎಲ್ಲ ಕಷ್ಟಗಳು ದೂರವಾಗುತ್ತವೆ.
ಗಣೇಶನ ಆಕಾರ ಕಾಣುವ ಅರಿಶಿನದ ಗಡ್ಡೆಯನ್ನು ಪ್ರತಿ ದಿನ ಪೂಜೆ ಮಾಡಿ. ಚಿನ್ನದ ಗಣೇಶ ಮೂರ್ತಿಗೆ ಮಾಡಿದ ಪೂಜೆ ಫಲ ಪ್ರಾಪ್ತಿಯಾಗುತ್ತದೆ.
ದನದ ಗೊಬ್ಬರದಲ್ಲಿ ದೇವಿ ಲಕ್ಷ್ಮಿ ವಾಸವಾಗಿರುತ್ತಾಳೆ. ದನದ ಸಗಣಿಯಿಂದ ಗಣೇಶ ಮೂರ್ತಿ ಮಾಡಿ ಅದನ್ನು ಪೂಜೆ ಮಾಡುವುದರಿಂದ ಗಣೇಶನ ಜೊತೆ ತಾಯಿ ಲಕ್ಷ್ಮಿ ಕೂಡ ಪ್ರಸನ್ನಳಾಗ್ತಾಳೆ.
ಅಶ್ವತ್ಥ ಮರ, ಮಾವಿನ ಮರ, ಬೇವಿನ ಮರದಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ. ಈ ಮರದಿಂದ ಮಾಡಿದ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜೆ ಮಾಡಿ.