ವೃದ್ಧಾಪ್ಯದಲ್ಲಿ ದುಡಿಯೋದು ಕಷ್ಟ, ಆದ್ರೆ ಕಾಯಿಲೆ ಕಸಾಲೆ ಅಂದ್ಕೊಂಡು ಖರ್ಚು ಜಾಸ್ತಿನೇ ಇರುತ್ತೆ. ಹಾಗಾಗಿ ಈಗಲೇ ಏನಾದ್ರೂ ಉಳಿತಾಯ ಯೋಜನೆ ಮಾಡಿಕೊಳ್ಳಬೇಕು ಅಂದುಕೊಂಡವರಿಗೆ ಪ್ರಧಾನ ಮಂತ್ರಿ ವಯ ವಂದನ ಯೋಜನೆ ಅತ್ಯುತ್ತಮ ಆಯ್ಕೆ.
ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹಣ ಕಟ್ಟಬೇಕು. ಅವಧಿ 10 ವರ್ಷಕ್ಕಿಂತಲೂ ಹೆಚ್ಚು. ನಿಮಗೆ ಶೇ.7.40ಯಷ್ಟು ಪಿಂಚಣಿ ಸಿಗುತ್ತದೆ. ಆದ್ರೆ ಈ ಯೋಜನೆಯ ಲಾಭ ಪಡೆಯಲು ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ಸುಮಾರು 15 ಲಕ್ಷ ರೂಪಾಯಿ ವರೆಗೆ ಹೂಡಿಕೆ ಮಾಡಿದ್ರೆ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು. ಅಥವಾ 6 ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಪೆನ್ಷನ್ ಬರುವಂತೆ ಆಯ್ಕೆ ಮಾಡಿಕೊಳ್ಳಬಹುದು.
ನೀವು ಹೂಡಿಕೆ ಮಾಡಿದ ಹಣದ ಆಧಾರದ ಮೇಲೆ ತಿಂಗಳಿಗೆ 1000 ರೂಪಾಯಿಯಿಂದ 9,250 ರೂಪಾಯಿವರೆಗೂ ಪೆನ್ಷನ್ ಗಣ ದೊರೆಯುತ್ತದೆ. ಎಲ್ ಐ ಸಿ ಆಫ್ ಇಂಡಿಯಾ ಈ ಯೋಜನೆಯನ್ನು ನಿಭಾಯಿಸ್ತಾ ಇದೆ. ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ಕಡೆಯಲ್ಲಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಸದ್ಯ 10 ವರ್ಷಗಳ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗೆ ಜನಪ್ರಿಯ ಬ್ಯಾಂಕ್ ಗಳು ಹೆಚ್ಚೆಂದರೆ ಶೇ.6.5ರಷ್ಟು ಬಡ್ಡಿ ನೀಡ್ತಾ ಇವೆ. ಆದ್ರೆ ಈ ಯೋಜನೆಯಲ್ಲಿ ಶೇ.7.4 ರಿಂದ 7.6 ರಷ್ಟು ಬಡ್ಡಿ ದೊರೆಯುತ್ತದೆ. ನೀವೇನಾದ್ರೂ ಈ ಸ್ಕೀಮ್ ಮಾಡಬೇಕು ಎಂದುಕೊಂಡಿದ್ರೆ 2023ರ ಮಾರ್ಚ್ 31 ಕೊನೆಯ ದಿನಾಂಕ.
ಅಕಸ್ಮಾತ್ ಸ್ಕೀಮ್ ಮಾಡಿ 10 ವರ್ಷದೊಳಗೆ ಪಾಲಿಸಿ ಹೋಲ್ಡರ್ ಮೃತಪಟ್ಟರೆ ಹಣವನ್ನು ಹಿಂದಿರುಗಿಸಲಾಗುತ್ತದೆ. ಖರೀದಿದಾರರಿಗೆ 10 ವರ್ಷಗಳಲ್ಲಿ ಯಾವುದೇ ಸಮಸ್ಯೆ ಆಗದೇ ಇದ್ದರೆ ಖರೀದಿ ಮೊತ್ತ ಹಾಗೂ ಫೈನಲ್ ಪೆನ್ಷನ್ ಇನ್ ಸ್ಟಾಲ್ಮೆಂಟ್ ಪಾವತಿಸಲಾಗುತ್ತದೆ.
ಪಿಂಚಣಿದಾರ ಅಥವಾ ಪತ್ನಿ ಯಾವುದಾದರೂ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅವಧಿಗೂ ಮುನ್ನವೇ ಈ ಸ್ಕೀಮ್ ಅನ್ನು ತೆರವು ಮಾಡಿಕೊಳ್ಳಬಹುದು. ಖರೀದಿ ಮೊತ್ತದ ಶೇ.98ರಷ್ಟು ಹಣವನ್ನು ಮರುಪಾವತಿಸಲಾಗುತ್ತದೆ. ಈ ಯೋಜನೆ ಮೇಲೆ ಶೇ.75ರಷ್ಟು ಸಾಲ ಸೌಲಭ್ಯ ಕೂಡ ದೊರೆಯುತ್ತದೆ.