
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಪ್ರತಿ ತಿಂಗಳು 28 ರೂಪಾಯಿ ಹೂಡಿಕೆ ಮಾಡುವ ಮೂಲಕ ನಾಲ್ಕು ಲಕ್ಷ ರೂಪಾಯಿಗಳವರೆಗೂ ರಿಟರ್ನ್ಸ್ ಪಡೆಯಬಹುದಾಗಿದೆ.
ಇಲ್ಲಿದೆ ಪ್ರಿಯತಮನ ವಂಚನೆ ಪತ್ತೆ ಹಚ್ಚಿದ ಇಂಟ್ರೆಸ್ಟಿಂಗ್ ಸ್ಟೋರಿ
“ನಿಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳುವುದು ಒಂದೇ ಹೆಜ್ಜೆ ದೂರವಿದೆ ! ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳಿಗೆ ನೋಂದಾಯಿತರಾಗಿ ಸುಭದ್ರ ಭವಿಷ್ಯದೆಡೆಗೆ ಒಂದು ಹೆಜ್ಜೆ ಇಡಿ,” ಎಂದು ಬ್ಯಾಂಕ್ ಆಫ್ ಬರೋಡಾ ಟ್ವಿಟ್ ಮಾಡಿದೆ.
ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ವಾರ್ಷಿಕ 342 ರೂಪಾಯಿಗಳ ಹೂಡಿಕೆ ಮಾಡುವ ಮೂಲಕ ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆಯಲ್ಲಿ ಮರಣಕ್ಕೆ ಎರಡು ಲಕ್ಷ ರೂಪಾಯಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಕಸ್ಮಾತ್ ಮರಣಕ್ಕೆ ಎರಡು ಲಕ್ಷ ರೂಪಾಯಿ (ಒಟ್ಟಾರೆ ನಾಲ್ಕು ಲಕ್ಷ ರೂಪಾಯಿ) ವಿಮೆಯ ಪ್ರಯೋಜನ ಪಡೆಯುವ ಅವಕಾಶವನ್ನು ಕೊಡಲಾಗಿದೆ.
ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ; ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಒಟ್ಟಾರೆ ಪ್ರೀಮಿಯಂ ಮೊತ್ತವಾದ 342 ರೂಪಾಯಿಗಳನ್ನು ವೈಯಕ್ತಿಕವಾಗಿ/ರಾಜ್ಯ ಸರ್ಕಾರ ಏಪ್ರಿಲ್ 1, 2020ರಿಂದ ಭರಿಸಲಿದೆ. ಮೇಲ್ಕಂಡ ಯೋಜನೆಗಳಿಗೆ ಕೇಂದ್ರದ ಪಾಲಿನ ಪ್ರೀಮಿಯಂ ಅನ್ನು ಎಲ್‌ಐಸಿಯಲ್ಲಿ ಕಾಪಾಡಲಾದ ಸಾಮಾಜಿಕ ಭದ್ರತಾ ನಿಧಿಯಿಂದ ಭರಿಸಲಾಗುವುದು.