alex Certify ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ; 17 ವರ್ಷದ ಬಾಲಕನಿಂದ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ; 17 ವರ್ಷದ ಬಾಲಕನಿಂದ ಕೃತ್ಯ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಕೃತ್ಯದ ಮಾಸ್ಟರ್ ಮೈಂಡ್ 17 ವರ್ಷದ ಬಾಲಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಫ್ಟ್ ವೇರ್ ಕಂಪನಿ ಮಾಡುವ ಉದ್ದೇಶ ಹೊಂದಿದ್ದ ತಮಿಳುನಾಡು ಮೂಲದ 17 ವರ್ಷದ ಬಾಲಕ ವಿದೇಶಿಯರಿಗೆ ಕಂಪ್ಯೂಟರ್ ಪ್ರೊಗ್ರಾಂ ಮಾಡಿ ಮಾರಾಟ ಮಾಡಿದ್ದ. ಇದೇ ಸಾಫ್ಟ್ ವೇರ್ ಪ್ರೊಗ್ರಾಂ ಮೂಲಕ ಬೆಂಗಳೂರು ಹಾಗೂ ಭೋಪಾಲ್ ಶಾಲೆಗಳಿಗೆ ದುಷ್ಕರ್ಮಿಗಳು ಬೆದರಿಕೆ ಇ-ಮೇಲ್ ರವಾನಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬಾಲಕ ಬೋಟ್ ಸಾಫ್ಟ್ ವೇರ್ ಪ್ರೊಗ್ರಾಂ ಅಭಿವೃದ್ಧಿಪಡಿಸಿದ್ದ. 200 ಡಾಲರ್ ಬಿಟ್ ಕಾಯಿನ್ ಮೂಲಕ ಸಾಫ್ಟ್ ವೇರ್ ಮಾರಾಟ ಮಾಡಿದ್ದ. ಈ ಸಾಫ್ಟ್ ವೇರ್ ಮೂಲಕ ಮಲ್ಟಿಪಲ್ ಮೇಲ್ ಗಳನ್ನು ಕಳುಹಿಸಲಾಗಿದೆ. ಐಪಿ ಅಡ್ರೆಸ್ ಮೂಲಕ ಬಾಲಕನನ್ನು ಪತ್ತೆ ಹಚ್ಚಲಾಗಿದ್ದು, ಬಾಂಬ್ ಬೆದರಿಕೆ ಕರೆಗೆ ಈ ಬಾಲಕನನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...