ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಮಹತ್ವದ ಸ್ಥಾನವಿದೆ. ಅಕ್ಷಯ ತೃತೀಯದಂದು ಮಾಡುವ ಕೆಲಸಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ದಾನ-ಧರ್ಮ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.
ಅಕ್ಷಯ ತೃತೀಯದಂದು 11 ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಾ ಸ್ಥಳದಲ್ಲಿ ಇಡಬೇಕು. ಲಕ್ಷ್ಮಿಯನ್ನು ಆಕರ್ಷಿಸುವ ಶಕ್ತಿ ಕವಡೆಯಲ್ಲಿದೆ.
ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಯನ್ನು ಕೇಸರಿ ಮತ್ತು ಅರಿಶಿನದೊಂದಿಗೆ ಪೂಜಿಸುವುದು ಶುಭಕರ. ಆರ್ಥಿಕ ತೊಂದರೆಗಳಿಂದ ಮುಕ್ತಿ ಸಿಗಲಿದೆ.
ಅಕ್ಷಯ ತೃತೀಯದಂದು ಗೋ, ಭೂಮಿ, ಎಳ್ಳು, ಚಿನ್ನ, ತುಪ್ಪ, ವಸ್ತ್ರ, ಬೆಳ್ಳಿ, ಉಪ್ಪು, ಜೇನುತುಪ್ಪ ದಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನ ಪ್ರಾಪ್ತಿಯಾಗುತ್ತದೆ.