ಸರ್ಕಾರಿ ಮುಖ್ಯ ಗುಮಾಸ್ತರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹತ್ತು ವಿದ್ಯಾರ್ಥಿಗಳನ್ನ ಬಂಧಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಕನಿಷ್ಠ ಹತ್ತು ವಿದ್ಯಾರ್ಥಿಗಳನ್ನು ಇರಿಸಲಾಗಿತ್ತು. ಪರೀಕ್ಷಾ ಪತ್ರಿಕೆ ಸೋರಿಕೆ ಆರೋಪದ ವಿರುದ್ಧ ವಿದ್ಯಾರ್ಥಿಗಳು ಅಹಮದಾಬಾದ್‌ನ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು.
ಅರೆಸ್ಟ್ ಆಗಿದ್ದ ಈ ಹತ್ತು ವಿದ್ಯಾರ್ಥಿಗಳು ಗುಜರಾತ್ ನ ಆಪ್ ಪಕ್ಷದ ಸದಸ್ಯರು. ಆಮ್ ಆದ್ಮಿ ಪಕ್ಷದ ನಾಯಕರ ಪ್ರಕಾರ ಅಹಮದಾಬಾದ್‌ನ ಜೈಲಿನಲ್ಲಿ 93 ಎಎಪಿ ಸದಸ್ಯರನ್ನ ನಾನಾ ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ಅದರಲ್ಲಿ ಈ ಹತ್ತು ವಿದ್ಯಾರ್ಥಿಗಳು ಸೇರಿದ್ದಾರೆ. ಎಲ್ಲಾ ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 22 ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ.
ಪಾಠ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಶಿಕ್ಷಕ ಸಾವು; ಮುಗಿಲು ಮುಟ್ಟಿದ ವಿದ್ಯಾರ್ಥಿಗಳ ಆಕ್ರಂದನ
ಬಂಧಿತರಲ್ಲಿ ಆರು ಮಂದಿ 18 ರಿಂದ 19 ವರ್ಷದೊಳಗಿನವರು ಎಂದು ನ್ಯಾಯಾಲಯದ ದಾಖಲೆಗಳಿಂದ ತಿಳಿದು ಬಂದಿದೆ. ಹತ್ತು ವಿದ್ಯಾರ್ಥಿಗಳಲ್ಲಿ ನಾಲ್ವರು ಎಎಪಿಯ ವಿದ್ಯಾರ್ಥಿ ವಿಭಾಗ – ಛತ್ರ ಯುವ ಸಂಘರ್ಷ ಸಮಿತಿ (ಸಿವೈಎಸ್ಎಸ್) ಸದಸ್ಯರಾಗಿದ್ದರೆ, ಆರು ಮಂದಿ ಪಕ್ಷದ ಯುವ ಘಟಕದ ಸದಸ್ಯರಾಗಿದ್ದಾರೆ.
ಗುಜರಾತ್‌ನಲ್ಲಿ ಡಿಸೆಂಬರ್ 12 ರಂದು ಸರ್ಕಾರಿ ಮುಖ್ಯ ಗುಮಾಸ್ತರ ನೇಮಕಾತಿಗಾಗಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಟ್ಟು 18 ಜನರನ್ನು ಬಂಧಿಸಲಾಗಿದೆ. ಗುಜರಾತ್‌ನ ಸಬರಕಾಂತ ಪೊಲೀಸರು ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಇನ್ನೂ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ.