alex Certify ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕಾರಿ, ಬರಬಹುದು ಇಂಥಾ ಗಂಭೀರ ಕಾಯಿಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕಾರಿ, ಬರಬಹುದು ಇಂಥಾ ಗಂಭೀರ ಕಾಯಿಲೆ….!

ಮೊಟ್ಟೆ ಸಂಪೂರ್ಣ ಆಹಾರ, ಅದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಚಳಿಗಾಲದಲ್ಲಿ ಜನರು ಮೊಟ್ಟೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ದಿನಕ್ಕೆ ಗರಿಷ್ಠ ಎಷ್ಟು ಮೊಟ್ಟೆಗಳನ್ನು ತಿನ್ನಬಹುದು ಅನ್ನೋದನ್ನು ತಿಳಿದುಕೊಳ್ಳುವುದು ಉತ್ತಮ.

ಮೊಟ್ಟೆ ತಿನ್ನುವುದರಿಂದ ನಮಗೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ ಮತ್ತು ಅನಗತ್ಯ ಕೊಬ್ಬು ಹೆಚ್ಚಾಗುವುದಿಲ್ಲ. ಮೊಟ್ಟೆಯಲ್ಲಿ ಎರಡು ಭಾಗಗಳಿವೆ. ಬಿಳಿ ಮತ್ತು ಹಳದಿ. ಮೊಟ್ಟೆಯ ಎರಡೂ ಭಾಗಗಳು ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಆದರೆ ಯಾವ ಭಾಗವನ್ನು ಯಾವಾಗ ಬಳಸಬೇಕು ಎಂದು ತಿಳಿದಿರಬೇಕು.

ಮೊಟ್ಟೆಯ ಬಿಳಿ ಭಾಗವು ಕೇವಲ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಜಿಮ್‌ಗೆ ಹೋಗುವವರು ಅಥವಾ ವ್ಯಾಯಾಮ ಮಾಡುವವರು ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಾರೆ. ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ 4 ರಿಂದ 5 ಗ್ರಾಂ ಪ್ರೋಟೀನ್ ಸಿಗುತ್ತದೆ. ಹಳದಿ ಭಾಗದಲ್ಲಿ 6 ಗ್ರಾಂನಷ್ಟು ಕೊಬ್ಬು ಮತ್ತು ಸುಮಾರು ಒಂದು ಗ್ರಾಂ ಪ್ರೋಟೀನ್ ಇರುತ್ತದೆ. ಹಾಗಾಗಿ ಸಂಪೂರ್ಣ ಒಂದು ಮೊಟ್ಟೆಯನ್ನು ತಿಂದರೆ 5 ರಿಂದ 6 ಗ್ರಾಂ ಪ್ರೋಟೀನ್ ಮತ್ತು 6 ಗ್ರಾಂ ಕೊಬ್ಬು ಸಿಗುತ್ತದೆ. ಒಂದು ಮೊಟ್ಟೆಯಲ್ಲಿರೋ ಹಳದಿ ಭಾಗವು 95 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಆರೋಗ್ಯಕರ ದೇಹಕ್ಕಾಗಿ ಪ್ರತಿದಿನ ಕೊಲೆಸ್ಟ್ರಾಲ್ ಸೇವನೆ 200 ಮಿಲಿಗ್ರಾಂಗಿಂತಲೂ ಕಡಿಮೆ ಇರಬೇಕು.

ಅಂಥದ್ರಲ್ಲಿ ನಾವು ಪ್ರತಿದಿನ 5 ಮೊಟ್ಟೆಗಳನ್ನು ಸೇವಿಸಿದರೆ 475 ಮಿಲಿ ಗ್ರಾಂ ಕೊಲೆಸ್ಟ್ರಾಲ್ ಅನ್ನು ಪಡೆಯುತ್ತೇವೆ. ನಿಗದಿತ ಪ್ರಮಾಣಕ್ಕಿಂತ ಇದು ಎರಡು ಪಟ್ಟು ಹೆಚ್ಚಾಗಿರುತ್ತದೆ. ಪ್ರತಿದಿನ 5 ಮೊಟ್ಟೆಗಳನ್ನು ತಿನ್ನುತ್ತಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಬಹಳಷ್ಟು ಹೆಚ್ಚಾಗುತ್ತದೆ. ಇದರಿಂದ ಹಲವಾರು ರೀತಿಯ ಕಾಯಿಲೆಗಳು ಕೂಡ ಬರಬಹುದು. ಇದು ಮುಖ್ಯವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ಅಂದರೆ, ನೀವು ದಿನಕ್ಕೆ 5 ಮೊಟ್ಟೆಗಳನ್ನು ತಿನ್ನುತ್ತಿದ್ದರೆ, ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹೃದ್ರೋಗಕ್ಕೆ ಸಹ ತುತ್ತಾಗಬಹುದು. ಹಾಗಾಗಿ ಪ್ರತಿದಿನ 4-5 ಮೊಟ್ಟೆ ತಿನ್ನುವ ಅಭ್ಯಾಸವನ್ನು ಬಿಟ್ಟುಬಿಡಿ, ಮಿತವಾಗಿ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...