ಪ್ರತಿದಿನ ಭಗವಂತನ ಪೂಜೆ ಮಾಡುವುದರಿಂದ ಎಲ್ಲ ಕಷ್ಟಗಳು ದೂರವಾಗುತ್ತವೆ. ಪೂಜೆಯಿಂದ ಸುಖ-ಸಮೃದ್ಧಿ ನೆಲೆಸುತ್ತದೆ. ದೇವರ ಪೂಜೆಗೆ ಅನೇಕ ವಸ್ತುಗಳನ್ನು ಬಳಸ್ತಾರೆ. ಅದ್ರಲ್ಲಿ ತುಪ್ಪದ ದೀಪ ಕೂಡ ಒಂದು. ತುಪ್ಪದ ದೀಪ ಬೆಳಗುವುದರಿಂದ ಆರೋಗ್ಯ ಸುಧಾರಿಸುವ ಜೊತೆಗೆ ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ಪ್ರತಿದಿನ ರಾತ್ರಿ ಶಿವಲಿಂಗದ ಬಳಿ ಶುದ್ಧ ತುಪ್ಪದ ದೀಪವನ್ನು ಹಚ್ಚಬೇಕು. ಇದ್ರಿಂದ ಆರೋಗ್ಯ ಸುಧಾರಿಸುವ ಜೊತೆಗೆ ಆರ್ಥಿಕ ವೃದ್ಧಿಯಾಗುತ್ತದೆ.
ವ್ಯಕ್ತಿಯೊಬ್ಬರಿಗೆ ಅನೇಕ ದಿನಗಳಿಂದ ಖಾಯಿಲೆ ಕಾಡುತ್ತಿದ್ದರೆ ಎಷ್ಟೇ ಔಷಧಿ ಮಾಡಿದ್ರೂ ಚೇತರಿಕೆ ಕಂಡಿಲ್ಲವೆಂದಾದ್ರೆ ಪ್ರತಿದಿನ ಸಂಜೆ ವ್ಯಕ್ತಿಯ ರೂಮಿನಲ್ಲಿ ತುಪ್ಪದ ದೀಪ ಹಚ್ಚಿ. ಅದಕ್ಕೆ ಸ್ವಲ್ಪ ಕೇಸರಿ ಹಾಕಿ. ಔಷಧಿ ಕೊಡುವುದನ್ನು ನಿಲ್ಲಿಸಬೇಡಿ. ಇದ್ರ ಜೊತೆಗೆ ತುಪ್ಪ-ಕೇಸರಿ ದೀಪವನ್ನು ಹಚ್ಚಿ. ಇದ್ರಿಂದ ಬರುವ ಸುವಾಸನೆ ಕೋಣೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ರಾತ್ರಿ ಯಾವ ಜಾಗದಲ್ಲಿ ಪಾತ್ರೆ ಸ್ವಚ್ಛಗೊಳಿಸಲಾಗುತ್ತದೆಯೋ ಆ ಜಾಗದಲ್ಲಿ ತುಪ್ಪದ ದೀಪವನ್ನು ಹಚ್ಚಿ. ದೀಪ ಹಚ್ಚುವ ಮೊದಲು ಆ ಜಾಗವನ್ನು ಸ್ವಚ್ಛಗೊಳಿಸಿಕೊಳ್ಳಿ. ಇದ್ರಿಂದ ವೈವಾಹಿಕ ಜೀವನದಲ್ಲಿ ಕಂಡು ಬರುವ ತೊಂದರೆ ಕಡಿಮೆಯಾಗಿ ಸುಖ-ಶಾಂತಿ ನೆಲೆಸುತ್ತದೆ.