ಪ್ರತಿ ದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ.
ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ ತೂಕ ಕಡಿಮೆ ಮಾಡಬಹುದು. ಹೆಚ್ಚುವರಿ ಬೊಜ್ಜನ್ನು ಕರಗಿಸುವ ಈ ಬೆಚ್ಚಗಿನ ನೀರು ನಿಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ. ಮಲಬದ್ಧತೆಯನ್ನೂ ನಿವಾರಿಸುತ್ತದೆ.
ಬೆಚ್ಚಗಿನ ನೀರು ನಿಮ್ಮ ಸೌಂದರ್ಯಕ್ಕೂ ನೆರವಾಗುತ್ತದೆ. ಮೊಡವೆಯಂಥ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತದೆ. ಮುಖದ ಕಲೆಗಳು ದೂರವಾಗಿ ತ್ವಚೆಗೆ ವಿಶೇಷ ಹೊಳಪು ತಂದುಕೊಡುತ್ತದೆ. ದೀರ್ಘ ಕಾಲ ಯೌವ್ವನಿಗರಾಗಿ ಕಾಣಲು ನಿತ್ಯ ಬೆಚ್ಚಗಿನ ನೀರು ಕುಡಿದರೆ ಸಾಕು.
ದೇಹಕ್ಕೆ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ದೇಹಕ್ಕೆ ಸೋಂಕಿನಿಂದ ಮುಕ್ತಿ ಸಿಗುತ್ತದೆ. ತೂಕ ಇಳಿಸುವ ಬಯಕೆ ಹೊಂದಿರುವವರು ನಿತ್ಯ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿದರೆ ಸಾಕು.