ಅನೇಕ ಹುಡುಗರು ಪ್ರತಿದಿನ ಶೇವ್ ಮಾಡ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಕೂದಲು ಬೆಳೆಯುತ್ತದೆ. ಹಾಗೆ ಚರ್ಮ ಒರಟಾಗಿರುತ್ತದೆ. ಹಾಗಾಗಿ ಪ್ರತಿದಿನ ಶೇವ್ ಮಾಡುವುದು ಬಹಳ ಮುಖ್ಯ. ಶೇವ್ ಮಾಡುವ ಹುಡುಗರು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಬೇಸಿಗೆಯಲ್ಲಿ ಧೂಳಿನಿಂದಾಗಿ ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ಇದ್ರಿಂದ ಚರ್ಮ ಒರಟಾಗುತ್ತದೆ. ಹಾಗಾಗಿ ಶೇವ್ ಮಾಡುವುದು ಸ್ವಲ್ಪ ಕಷ್ಟ. ಗಾಯವಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಶೇವ್ ಮಾಡುವ ಮೊದಲು ಸ್ವಲ್ಪ ಲೋಷನ್ ಹಚ್ಚಿಕೊಂಡು ನಂತ್ರ ಶೇವ್ ಮಾಡಿ.
ಅನೇಕರು ಒಂದೇ ರೇಜರ್ ನಲ್ಲಿ ಅನೇಕ ಬಾರಿ ಶೇವ್ ಮಾಡ್ತಾರೆ. ರೇಜರ್ ನಲ್ಲಿ ಕೊಳಕಾಗುವುದರಿಂದ ಚರ್ಮಕ್ಕೆ ಅಲರ್ಜಿಯಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ.
ಮೃದುವಾಗಿ, ನಿಧಾನವಾಗಿ ರೇಜರ್ ಬಳಸಿ. ಇಲ್ಲವಾದ್ರೆ ಚರ್ಮ ಕಟ್ ಆಗುವ ಸಾಧ್ಯತೆ ಇರುತ್ತದೆ. ಹಾಗೆ ಕೂದಲು ಯಾವ ದಿಕ್ಕಿನಲ್ಲಿದೆಯೋ ಅದೇ ದಿಕ್ಕಿನಲ್ಲಿ ಶೇವ್ ಮಾಡಿ.
ಶೇವ್ ಮಾಡಿದ ನಂತ್ರ ಅನೇಕ ಹುಡುಗರು ಮನೆಯಲ್ಲಿರುವ ಯಾವುದೋ ಲೋಷನ್ ಹಚ್ಚಿಕೊಳ್ತಾರೆ. ಆದ್ರೆ ಹಾಗೆ ಮಾಡುವುದು ತಪ್ಪು. ಯಾವಾಗ್ಲೂ ಆಲ್ಕೋಹಾಲ್ ಮುಕ್ತ ಲೋಷನ್ ಬಳಸಬೇಕು. ಇಲ್ಲವಾದ್ರೆ ಚರ್ಮ ಮತ್ತಷ್ಟು ಒರಟಾಗುವ ಸಾಧ್ಯತೆ ಇರುತ್ತದೆ.