alex Certify ಪ್ರತಿದಿನ ಮನೆಗೆ ಈ ವಸ್ತು ತಂದ್ರೆ ಬದಲಾಗುತ್ತೆ ʼಅದೃಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಮನೆಗೆ ಈ ವಸ್ತು ತಂದ್ರೆ ಬದಲಾಗುತ್ತೆ ʼಅದೃಷ್ಟʼ

ವಾರದ ಏಳು ದಿನಕ್ಕೂ ದೇವಾನುದೇವತೆಗಳಿಗೂ ಸಂಬಂಧವಿದೆ. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಹಾಗೆ ಎಲ್ಲ ದೇವರಿಗೂ ಪ್ರಿಯವಾದ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ದೇವಾನುದೇವತೆಗಳನ್ನು ಆಕರ್ಷಿಸುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ. ಹಾಗಾಗಿ ಪ್ರತಿ ದಿನ ದೇವಾನುದೇವತೆಗಳಿಗೆ ಪ್ರಿಯವಾಗುವ ಬಣ್ಣದ ವಸ್ತು ಅಥವಾ ಬಟ್ಟೆಯನ್ನು ಮನೆಗೆ ತರುವುದರಿಂದ ಒಳ್ಳೆಯದಾಗುತ್ತದೆ.

ಭಗವಂತ ಶಿವನಿಗೆ ಪ್ರಿಯವಾದ ವಾರ ಸೋಮವಾರ. ಶಿವನಿಗೆ ಬಿಳಿ ಬಣ್ಣ ಬಹಳ ಪ್ರಿಯ. ಬಿಳಿ ಬಣ್ಣದ ಯಾವುದೇ ಪ್ರತಿಮೆಯನ್ನು ಮನೆಗೆ ತನ್ನಿ.

ಮಂಗಳವಾರ ಮಂಗಳದೇವ ಹಾಗೂ ಹನುಮಂತನಿಗೆ ಅರ್ಪಿತ. ಈತನಿಗೆ ಕೇಸರಿ ಹಾಗೂ ಕೆಂಪು ಬಣ್ಣ ಇಷ್ಟ. ಇದರಲ್ಲಿ ಯಾವುದಾದ್ರೂ ಬಣ್ಣದ ಶೋ ವಸ್ತುವನ್ನು ಮನೆಯ ದಕ್ಷಿಣ ದಿಕ್ಕಿಗೆ ಇಡಿ.

ಬುದ್ಧ ಹಾಗೂ ಗಣೇಶನಿಗೆ  ಬುಧವಾರ ಸಮರ್ಪಿತ. ಇಬ್ಬರಿಗೂ ಹಸಿರು ನೆಚ್ಚಿನ ಬಣ್ಣ. ಈ ದಿನ ಹಸಿರು ಬಣ್ಣದ ಪೋಸ್ಟರನ್ನು ಮುಖ್ಯದ್ವಾರದ ಬಳಿ ಹಾಕಿ.

ಗುರುವಾರ ಅಂದ್ರೆ ಬೃಹಸ್ಪತಿ ವಾರ. ಗುರು ಬೃಹಸ್ಪತಿಯನ್ನು ಒಲಿಸಿಕೊಳ್ಳಲು ಹಳದಿ ಬಣ್ಣದ ಬಟ್ಟೆಯನ್ನು ಅಡುಗೆ ಮನೆಯಲ್ಲಿಡಿ.

ಶುಕ್ರ ದೇವ ಹಾಗೂ ದೇವತೆಗಳಿಗೆ ಶುಕ್ರವಾರ ಸಮರ್ಪಿತ. ಈ ದಿನ ಬಿಳಿ ಬಣ್ಣದ ಭಕ್ಷ್ಯ ತಯಾರಿಸಿ. ಗುಲಾಬಿ ಅಥವಾ ವರ್ಣರಂಜಿತ ಬಣ್ಣದ ಬಟ್ಟೆಯನ್ನು ದೇವರ ಮನೆಯಲ್ಲಿಡಿ.

ಶನಿವಾರ ಶನಿದೇವರ ವಾರ. ನೀಲಿ ಹಾಗೂ ಕಪ್ಪು ಶನಿಗೆ ಪ್ರಿಯ. ಈ ದಿನ ನೀಲಿ ಅಥವಾ ಕಪ್ಪು ಬಣ್ಣದ ಶೋಪೀಸ್ ಅಥವಾ ಪೇಂಟಿಂಗನ್ನು ಗೋಡೆಗೆ ಹಾಕಿ.

ಸೂರ್ಯನಾರಾಯಣನ ದಿನ ಭಾನುವಾರ. ಗುಲಾಬಿ, ಕೆಂಪು, ಕಿತ್ತಳೆ ಬಣ್ಣಕ್ಕೆ ಬಹಳ ಮಹತ್ವವಿದೆ. ಈ ಬಣ್ಣದ ಯಾವುದಾದ್ರೂ ಒಂದು ವಸ್ತುವನ್ನು ಮಕ್ಕಳ ಕೋಣೆಗೆ ತಂದು ಹಾಕಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...