ಬಿಡುವಿಲ್ಲದ ಜೀವನಶೈಲಿಯಿಂದಾಗಿ ಎಲ್ಲರೂ ಬೆಳಗಿನ ಉಪಹಾರಕ್ಕೆ ಬ್ರೆಡ್ ಸೇವಿಸ್ತಾರೆ. ಬ್ರೆಡ್‌ನಿಂದ ಇನ್ನೂ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದನ್ನೂ ಜನರು ಬಹಳ ಉತ್ಸಾಹದಿಂದ ತಿನ್ನುತ್ತಾರೆ.
ಆದರೆ ಬ್ರೆಡ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಬ್ರೆಡ್ ಸೇವನೆಯಿಂದ ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳು ನಿಮ್ಮನ್ನು ಸುತ್ತುವರಿಯಬಹುದು.
ಬ್ರೆಡ್ ಸೇವನೆಯ ಅನಾನುಕೂಲಗಳು
ಪ್ರತಿದಿನ ಬ್ರೆಡ್ ಸೇವಿಸಿದರೆ ಮಧುಮೇಹ ಬರುವ ಅಪಾಯವು ಬಹಳಷ್ಟು ಹೆಚ್ಚಾಗುತ್ತದೆ. ಸಕ್ಕರೆ ಕಾಯಿಲೆ ಕೂಡ ಇನ್ನೂ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈಗಾಗ್ಲೇ ಸಕ್ಕರೆ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬ್ರೆಡ್ ಸೇವಿಸಬಾರದು. ದಿನನಿತ್ಯ ಬ್ರೆಡ್ ತಿನ್ನುವವರ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ. ಇದರಿಂದ ದೇಹವೂ ದುರ್ಬಲವಾಗುತ್ತದೆ. ಅದಕ್ಕಾಗಿಯೇ ಬ್ರೆಡ್ ಸೇವನೆಯನ್ನು ತಪ್ಪಿಸಬೇಕು.
ಹೊಟ್ಟೆ ಹಸಿದಾಗ ರೊಟ್ಟಿ ತಿನ್ನುವುದು ಸೂಕ್ತ. ಹೊಟ್ಟೆ ತುಂಬುವುದರ ಜೊತೆಗೆ ದೇಹಕ್ಕೆ ಪೌಷ್ಠಿಕಾಂಶವೂ ದೊರೆಯುತ್ತದೆ. ಹಸಿದಿರುವಾಗ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆ ಸಮಯದಲ್ಲಿ ಬ್ರೆಡ್ ಸೇವಿಸಿದರೆ ಅಪೌಷ್ಠಿಕತೆಗೆ ಬಲಿಯಾಗಬಹುದು. ಬ್ರೆಡ್ ಸೇವನೆಯಿಂದ ತೂಕ ಕೂಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ನೀವು ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು.