ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಬೆಳಗಿನ ಉಪಹಾರವಂತೂ ಹೆಲ್ದಿಯಾಗಿರಲೇಬೇಕು. ಏಕೆಂದರೆ ಇದು ದಿನವಿಡೀ ನಮ್ಮನ್ನು ಕ್ರಿಯಾಶೀಲವಾಗಿರಿಸುತ್ತದೆ. ಪೋಷಕಾಂಶಗಳಿಂದ ಕೂಡಿದ ಮೊಸರು ದಿನವನ್ನು ಪ್ರಾರಂಭಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಬೆಳಗ್ಗೆ ಮೊಸರು ತಿನ್ನುವುದರಿಂದ ಅನೇಕ ಲಾಭಗಳಿವೆ. ಮೊಸರು ಪೋಷಕಾಂಶಗಳ ನಿಧಿ.
ಕ್ಯಾಲ್ಸಿಯಂ, ಪ್ರೋಟೀನ್ ವಿಟಮಿನ್ ಬಿ 12, ಬಿ 2, ಪೊಟ್ಯಾಸಿಯಮ್, ಮೆಗ್ನೀಸಿಯಮ್ ನಂತಹ ಅಗತ್ಯ ಪೋಷಕಾಂಶಗಳ ಮೂಲವಾಗಿದೆ. ಈ ಪೋಷಕಾಂಶಗಳು ಮೂಳೆಯ ಆರೋಗ್ಯಕ್ಕೆ ಅತ್ಯಗತ್ಯ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರೋಬಯಾಟಿಕ್‌ಗಳು ಮೊಸರಿನಲ್ಲಿ ಕಂಡುಬರುತ್ತವೆ.
ಈ ಪ್ರೋಬಯಾಟಿಕ್‌ಗಳು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಉತ್ತೇಜಿಸುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಾಗಿವೆ. ಇವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತವೆ. ಮೊಸರನ್ನು ಬೆಳಗ್ಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನದಲ್ಲಿಡಬಹುದು. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಅಥವಾ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೊಸರು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್ ಅಂಶವು ದೀರ್ಘಾವಧಿಯವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಪದೇ ಪದೇ ಆಹಾರ ಸೇವಿಸುವ ಹಂಬಲ ಕಡಿಮೆಯಾಗುತ್ತದೆ. ಮೊಸರು ಒಂದು ಬಹುಮುಖ ಆಹಾರವಾಗಿದ್ದು ಇದನ್ನು ಹಲವು ವಿಧಗಳಲ್ಲಿ ಆನಂದಿಸಬಹುದು.
ಇದನ್ನು ಸರಳವಾಗಿ ಹಾಗೇ ತಿನ್ನಬಹುದು ಅಥವಾ ಗ್ರಾನೋಲಾ ಮುಂತಾದ ಮೇಲೋಗರಗಳೊಂದಿಗೆ ತಿನ್ನಬಹುದು. ಬೆಳಗಿನ ಉಪಾಹಾರವನ್ನು ತಯಾರಿಸಲು ಕಷ್ಟವೆನಿಸಿದರೆ, ಸಮಯವಿಲ್ಲ ಎಂದಾದಲ್ಲಿ ಮೊಸರು ಸೇವಿಸಿ. ಅದನ್ನು ಬೇಯಿಸುವ ಅಗತ್ಯವಿಲ್ಲ. ಹಾಗೆಯೇ ತಿನ್ನಬಹುದು. ನಿಮ್ಮ ನೆಚ್ಚಿನ ಟಾಪಿಂಗ್ಸ್ ಬೆರೆಸಿಕೊಂಡು ಕೂಡ ಸವಿಯಬಹುದು.