ಬೀಟ್ರೂಟ್ ಜ್ಯೂಸ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ.ಏಕೆಂದರೆ ಬೀಟ್‌ರೂಟ್‌ಗಳಲ್ಲಿ ಆಕ್ಸ್‌ಲೇಟ್ ಪ್ರಮಾಣವು ಅಧಿಕವಾಗಿದ್ದು, ಅದು ದೇಹಕ್ಕೆ ಅನೇಕ ರೀತಿಯಲ್ಲಿ ಹಾನಿ ಮಾಡುತ್ತದೆ. ಆದ್ದರಿಂದ ಬೀಟ್ರೂಟ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ನೀವು ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳಾಗಬಹುದು.
ಕಿಡ್ನಿ ಸ್ಟೋನ್ ಅಪಾಯ: ಬೀಟ್‌ರೂಟ್‌ನಲ್ಲಿ ಆಕ್ಸಲೇಟ್ ಸಮೃದ್ಧವಾಗಿದೆ. ಇದು ಕಿಡ್ನಿಯಲ್ಲಿ ಕಲ್ಲಿನ ರಚನೆಗೆ ಕಾರಣವಾಗಬಹುದು. ನಿಮಗೆ ಈಗಾಗಲೇ ಕಿಡ್ನಿ ಕಲ್ಲುಗಳ ಸಮಸ್ಯೆ ಇದ್ದರೆ ನೀವು ಬೀಟ್ರೂಟ್ ಅಥವಾ ಅದರ ರಸವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಏಕೆಂದರೆ ಬೀಟ್‌ರೂಟ್‌ನಲ್ಲಿರುವ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರು ಬೀಟ್‌ರೂಟ್ ಅನ್ನು ಸೇವಿಸಬಾರದು.
ಹೊಟ್ಟೆ ಕೆಡಬಹುದು: ಬೀಟ್ರೂಟ್‌ನಲ್ಲಿ ನೈಟ್ರೇಟ್ ಇದೆ. ಅದು ಹೊಟ್ಟೆಗೆ ಒಳ್ಳೆಯದಲ್ಲ. ಆದ್ದರಿಂದ ನಿಮಗೆ ಹೊಟ್ಟೆ ನೋವು ಇದ್ದರೆ ಬೀಟ್ರೂಟ್ ಸೇವಿಸಬೇಡಿ. ಏಕೆಂದರೆ ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು.
ಯಕೃತ್ತಿಗೆ ಹಾನಿ: ಬೀಟ್ರೂಟ್ ಸೇವಿಸುವುದರಿಂದ ಯಕೃತ್ತಿನ ಸಮಸ್ಯೆ ಉಂಟಾಗುತ್ತದೆ. ಏಕೆಂದರೆ ಬೀಟ್‌ರೂಟ್‌ನಲ್ಲಿ ತಾಮ್ರ, ಕಬ್ಬಿಣ, ರಂಜಕ, ಮೆಗ್ನೀಸಿಯಮ್ ಇದ್ದು, ಈ ಅಂಶಗಳು ಯಕೃತ್ತಿಗೆ ಹಾನಿ ಮಾಡುತ್ತವೆ. ಅಷ್ಟೇ ಅಲ್ಲ ಬೀಟ್ರೂಟ್ ಜ್ಯೂಸ್ ಅನ್ನು ಹೆಚ್ಚು ಕುಡಿದರೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಬರಬಹುದು.
ಅನಾಫಿಲ್ಯಾಕ್ಸಿಸ್ ಸಮಸ್ಯೆ: ಬೀಟ್ರೂಟ್ ಅನಾಫಿಲ್ಯಾಕ್ಸಿಸ್‌ಗೆ ಕಾರಣವಾಗಬಹುದು. ಇದು ಒಂದು ರೀತಿಯ ಅಲರ್ಜಿ ಸಮಸ್ಯೆಯಾಗಿದ್ದು, ಇದರಿಂದಾಗಿ ಚರ್ಮದ ದದ್ದುಗಳು, ತುರಿಕೆ, ಊತದ ಲಕ್ಷಣಗಳು ಕಂಡುಬರುತ್ತವೆ.