
ದಿನ ನೀರು ಕುಡಿಯುವುದಕ್ಕೆಂದು ಬಾಟಲ್ ಉಪಯೋಗಿಸುತ್ತೇವೆ. ಮಕ್ಕಳು ಸ್ಕೂಲ್ ಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಬಾಟಲ್ ಉಪಯೋಗಿಸುತ್ತಾರೆ. ಆದರೆ ಈ ಬಾಟಲ್ ಗಳಲ್ಲಿ ನೀರು ತುಂಬಿಸಿಟ್ಟ ಕಾರಣ ಒಂದು ರೀತಿಯ ವಾಸನೆ ಬರುತ್ತದೆ. ಇದನ್ನು ಆಗಾಗ ಸ್ವಚ್ಛಗೊಳಿಸಿದರೆ ಮಾತ್ರ ಕ್ಲೀನ್ ಆಗಿರುತ್ತದೆ. ಇಲ್ಲಿ ಸುಲಭವಾದ ಟಿಪ್ಸ್ ಇದೆ ಟ್ರೈ ಮಾಡಿ.
ಬಾಟಲ್ ಗೆ 1 ಕಪ್ ನೀರು ಹಾಕಿ ಮುಚ್ಚಳ ಮೌತ್ ಫ್ರೆಶ್ನರ್ ಹಾಕಿ ಚೆನ್ನಾಗಿ ಅಲುಗಾಡಿಸಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಾಟಲ್ ಅನ್ನು ಚೆನ್ನಾಗಿ ತೊಳೆಯಿರಿ.
ಬಾಟಲ್ ಗೆ 1 ಗ್ಲಾಸ್ ನೀರು ಹಾಕಿಕೊಂಡು ಅದಕ್ಕೆ 3 ಚಮಚ ಅಕ್ಕಿ ಹಾಕಿ ನಂತರ ಇದಕ್ಕೆ 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, 2 ಟೇಬಲ್ ಸ್ಪೂನ್ ವಿನೇಗರ್ ಹಾಕಿ ಚೆನ್ನಾಗಿ ಅಲುಗಾಡಿಸಿ 5 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.
ಬಾಟಲ್ ಗೆ 1 ಕಪ್ ಬಿಸಿನೀರು ಹಾಕಿ ಅದಕ್ಕೆ 2 ಚಮಚ ವಿನೇಗರ್ ಹಾಕಿ ಚೆನ್ನಾಗಿ ಅಲುಗಾಡಿಸಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.
ಇದರಿಂದ ಬಾಟಲ್ ನಲ್ಲಿ ಬರುವ ವಾಸನೆ ಹೋಗುತ್ತದೆ. ಹಾಗೇ ಬಾಟಲ್ ಕೂಡ ಕ್ಲೀನ್ ಆಗುತ್ತದೆ.