ಅನಾನಸ್ ತುಂಬಾ ರಸಭರಿತವಾದ ಹಣ್ಣು. ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಖನಿಜಗಳಂತಹ ಪೋಷಕಾಂಶಗಳ ಉಗ್ರಾಣ. ಸಾಮಾನ್ಯವಾಗಿ ನಾವು ಅನಾನಸ್ ಅನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುತ್ತೇವೆ. ಅನಾನಸ್ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ತೂಕ ಇಳಿಸುವಲ್ಲಿ ಕೂಡ ಅನಾನಸ್ ಸಹಾಯಕವಾಗಿದೆ.
ಇದಕ್ಕಾಗಿ ವಿಶೇಷ ರೀತಿಯ ಅನಾನಸ್ ಚಹಾ ಮಾಡಿಕೊಂಡು ಕುಡಿಯಬಹುದು. ಅದನ್ನು ತಯಾರಿಸುವ ವಿಧಾನ ನೋಡೋಣ. ಅನಾನಸ್‌ನಲ್ಲಿ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ತುಂಬಾ ಕಡಿಮೆ. ಆದ್ದರಿಂದ ಅನಾನಸ್ ಚಹಾವು ದೇಹದ ಕೊಬ್ಬನ್ನು ಸುಡುವಲ್ಲಿ ಸಹಾಯಕವಾಗಿದೆ. ಪ್ರತಿದಿನ 1 ಕಪ್ ಅನಾನಸ್ ಚಹಾವನ್ನು ಸೇವಿಸಿದರೆ ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು.
ಅನಾನಸ್ ಚಹಾಕ್ಕೆ ಬೇಕಾಗುವ ಸಾಮಗ್ರಿ – ನಿಂಬೆ ರಸ, ನೀರು, ಟೀ ಬ್ಯಾಗ್, ಅನಾನಸ್ ರಸ
ಅನಾನಸ್ ಟೀ ತಯಾರಿಸುವ ವಿಧಾನ- ಅನಾನಸ್ ಚಹಾ ಮಾಡಲು ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಕುದಿಸಿ. ಬಿಸಿ ನೀರನ್ನು ಒಂದು ಕಪ್‌ನಲ್ಲಿ ಹಾಕಿ ಅದರಲ್ಲಿ ಟೀ ಬ್ಯಾಗ್ ಮುಳುಗಿಸಿ. ಸುಮಾರು 5-7 ನಿಮಿಷಗಳ ಕಾಲ ಅದನ್ನು ಹಾಗೇ ಬಿಡಿ. ಬಳಿಕ ಅದಕ್ಕೆ ಅನಾನಸ್ ರಸ ಮತ್ತು ನಿಂಬೆ ರಸವನ್ನು ಹಾಕಿ.ಎಲ್ಲವನ್ನೂ ಚೆನ್ನಾಗಿ ಬೆರೆಸಿ ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾದ ಬಳಿಕ ಕುಡಿಯಿರಿ.