ಏಲಕ್ಕಿ ಸಿಹಿ ತಿನಿಸುಗಳ ರುಚಿಯನ್ನು ದುಪ್ಪಟ್ಟು ಮಾಡಬಲ್ಲ ಮಸಾಲೆಗಳಲ್ಲೊಂದು. ಕೇವಲ ಸಿಹಿಯಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಇತರ ಭಕ್ಷ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಪಲಾವ್, ಬಿರಿಯಾನಿ, ಹಲ್ವಾ, ಪಾಯಸ ಹೀಗೆ ಎಲ್ಲದಕ್ಕೂ ಏಲಕ್ಕಿ ಬೇಕು.
ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಹಾಗೂ ಎಂಟಿ ಒಕ್ಸಿಡೆಂಟ್‌ಗಳು ಇದರಲ್ಲಿ ಕಂಡುಬರುತ್ತವೆ. ಪ್ರತಿದಿನ ಒಂದು ಏಲಕ್ಕಿಯನ್ನು ಅಗಿದು ತಿನ್ನಬೇಕು. ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.
ಜೀರ್ಣಕ್ರಿಯೆ – ಏಲಕ್ಕಿ ಸೇವನೆಯಿಂದ ಕಿಣ್ವಗಳ ಸ್ರವಿಸುವಿಕೆಗೆ ಉತ್ತೇಜನ ಸಿಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರಿಸುವಿಕೆ, ಗ್ಯಾಸ್ ಮತ್ತು ಹೊಟ್ಟೆ ಸೆಳೆತದಂತಹ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
ತಾಜಾ ಉಸಿರು – ಏಲಕ್ಕಿಯನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ನಿತ್ಯವೂ ಇದನ್ನು ಜಗಿದು ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ ಮತ್ತು ತಾಜಾತನ ಬರುತ್ತದೆ.
ರಕ್ತ ಪರಿಚಲನೆ ಉತ್ತಮವಾಗಿರುತ್ತದೆ – ಏಲಕ್ಕಿ, ರಕ್ತವನ್ನು ತೆಳುವಾಗಿಸುವ ಕೆಲಸ ಮಾಡುತ್ತದೆ. ಇದು ರಕ್ತನಾಳಗಳಲ್ಲಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಾಗಿ ಏಲಕ್ಕಿ ಸೇವನೆಯಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು. ಜೊತೆಗೆ ಹೃದಯಾಘಾತದ ಅಪಾಯವನ್ನು ಸಹ ಇದು ಕಡಿಮೆ ಮಾಡುತ್ತದೆ.
ದೇಹವು ನಿರ್ವಿಶೀಕರಣಗೊಳ್ಳುತ್ತದೆ – ದೇಹದಲ್ಲಿ ಟಾಕ್ಸಿನ್‌ಗಳು ಸಂಗ್ರಹವಾಗಲು ಪ್ರಾರಂಭಿಸಿದರೆ, ಅವು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸಬಹುದು. ನಿಯಮಿತವಾಗಿ ಏಲಕ್ಕಿ ಸೇವನೆಯಿಂದ ಮೂತ್ರದ ಹರಿವು ಹೆಚ್ಚಾಗುತ್ತದೆ ಮತ್ತು ದೇಹವು ನಿರ್ವಿಶೀಕರಣಗೊಳ್ಳುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳನ್ನು ಸಹ ಇದು ನಿವಾರಿಸಬಲ್ಲದು.