ಶಾಸ್ತ್ರದಲ್ಲಿ ಯಾವುದೇ ಒಳ್ಳೆ ಕೆಲಸ ಮಾಡುವಾಗಲೂ ಮುಹೂರ್ತ ನೋಡಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡಿದ ಕೆಲಸ ಒಳ್ಳೆಯ ಫಲ ನೀಡುತ್ತದೆ ಎಂದು ನಂಬಲಾಗಿದೆ. ಅಶುಭ ಸಮಯದಲ್ಲಿ ಶುರು ಮಾಡಿದ ಕೆಲಸದ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಕಾಲದಲ್ಲಿ ಯಾವುದೇ ಶುಭ, ಮಂಗಳಕರ ಕೆಲಸವನ್ನು ಮಾಡಬಾರದು.
ಶನಿ ಗ್ರಹದ ನಂತ್ರ ರಾಹುವನ್ನು ಅಶುಭ ಗ್ರಹವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ದಿನ 90 ನಿಮಿಷ ರಾಹು ಕಾಲವಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ಯಾವುದೇ ಶುಭ ಕೆಲಸ ಅಶುಭ ಫಲ ನೀಡುತ್ತದೆ. ಸಾಮಾನ್ಯವಾಗಿ ಪ್ರತಿ ದಿನ ಒಂದೊಂದು ಸಮಯ ರಾಹುವಿನದ್ದಾಗಿರುತ್ತದೆ.
ಸೋಮವಾರ ಬೆಳಿಗ್ಗೆ 7.30 ರಿಂದ 9ರವರೆಗೆ ರಾಹು ಕಾಲವಿರುತ್ತದೆ.
ಮಂಗಳವಾರ 3 ಗಂಟೆಯಿಂದ 4.30 ರವರೆಗೆ ರಾಹು ಕಾಲವಿರುತ್ತದೆ.
ಬುಧವಾರ 12 ಗಂಟೆಯಿಂದ 1.30 ರವರೆಗೆ ರಾಹು ಕಾಲವಿರುತ್ತದೆ.
ಗುರುವಾರ 1.30 ರಿಂದ 3 ಗಂಟೆಯವರೆಗೆ ರಾಹು ಕಾಲವಿರುತ್ತದೆ.
ಶುಕ್ರವಾರ ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ರಾಹು ಕಾಲವಿರುತ್ತದೆ.
ಶನಿವಾರ ಬೆಳಿಗ್ಗೆ 9 ಗಂಟೆಯಿಂದ 10.30 ರವರೆಗೆ ರಾಹು ಕಾಲವಿರುತ್ತದೆ.
ಭಾನುವಾರ ಸಂಜೆ 4.30 ರಿಂದ 6 ಗಂಟೆಯವರೆಗೆ ರಾಹು ಕಾಲವಿರುತ್ತದೆ.