ಜಗತ್ತಿನಾದ್ಯಂತ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಭಾರತದಲ್ಲಿ ಕೂಡ ಕೋವಿಡ್‌ನ ಹೊಸ ರೂಪಾಂತರಿ ವೈರಸ್ ಬಿಎಫ್.7 ಆತಂಕ ಸೃಷ್ಟಿಸಿದೆ. ಕೊರೊನಾಕ್ಕೆ ಭಯಪಟ್ಟುಕೊಂಡು ಮನೆಯಲ್ಲೇ ಕೂರುವುದು ಅಸಾಧ್ಯ. ಆದರೆ ಈ ಸಾಂಕ್ರಾಮಿಕ ಕಾಯಿಲೆಯಿಂದ ಬಚಾವ್ ಆಗುವುದು ಕೂಡ ಅನಿವಾರ್ಯವಾಗಿದೆ. ಹಾಗಾಗಿ ಕೊರೊನಾಗೆ ಭಯಪಡುವ ಬದಲು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು.
ಕೋವಿಡ್-19 ಲಸಿಕೆಯ ಎಲ್ಲಾ ಮೂರು ಡೋಸ್‌ಗಳನ್ನು ಪಡೆಯದೇ ಇದ್ದರೆ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗಿರುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಲೆಮನ್‌ಗ್ರಾಸ್ ಅಥವಾ ಮಜ್ಜಿಗೆ ಹುಲ್ಲಿನ ಚಹಾವನ್ನು ನಿಯಮಿತವಾಗಿ ಸೇವಿಸಿ.
ಲೆಮನ್‌ಗ್ರಾಸ್ ಒಂದು ಹಸಿರು ಸಸ್ಯವಾಗಿದ್ದು, ಇದನ್ನು ಆಗ್ನೇಯ ದೇಶಗಳಲ್ಲಿ ಆಹಾರವಾಗಿ ಬಳಸಲಾಗುತ್ತದೆ. ಲೆಮನ್‌ಗ್ರಾಸ್‌ನಿಂದ ಹರ್ಬಲ್ ಟೀ ಮಾಡಿ ಕುಡಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದಲ್ಲದೆ ಜೀರ್ಣಕ್ರಿಯೆಯೂ ಚೆನ್ನಾಗಿ ಆಗುವುದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ.
ಲೆಮನ್‌ಗ್ರಾಸ್ ಹರ್ಬಲ್ ಟೀ ಹೇಗೆ ಕೆಲಸ ಮಾಡುತ್ತದೆ?
ಲೆಮನ್ ಗ್ರಾಸ್, ಎಂಟಿ-ಒಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ದೇಹಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪರಿಣಾಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೋವಿಡ್ -19 ನಂತಹ ವೈರಲ್ ಸೋಂಕನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ದೇಹದ ವಿಷವನ್ನು ಹೊರಹಾಕಲು ಸಹಕಾರಿಯಾಗಿದೆ.
ಲೆಮನ್‌ಗ್ರಾಸ್ ಹರ್ಬಲ್ ಚಹಾ ತಯಾರಿಸುವುದು ಹೇಗೆ?
ಲೆಮನ್‌ಗ್ರಾಸ್ ಚಹಾ ತಯಾರಿಸುವುದು ತುಂಬಾ ಸುಲಭ, ಮನೆಯಲ್ಲೇ ನೀವದನ್ನು ಮಾಡಿಕೊಳ್ಳಬಹುದು. ಒಂದಷ್ಟು ಲೆಮನ್ ಗ್ರಾಸ್ ಜೊತೆಗೆ ಜೇನುತುಪ್ಪ, ಲವಂಗ, ಶುಂಠಿ ಮತ್ತು ತುಳಸಿಯನ್ನು ತೆಗೆದುಕೊಳ್ಳಿ. ಚಿಕ್ಕ ಪಾತ್ರೆಯೊಂದರಲ್ಲಿ ನೀರನ್ನು ಕುದಿಸಿ, ಅದಕ್ಕೆ ಜೇನುತುಪ್ಪ, ಲೆಮನ್‌ಗ್ರಾಸ್, ಲವಂಗ, ಶುಂಠಿ, ತುಳಸಿ ಎಲ್ಲವನ್ನು ಹಾಕಿ ಮತ್ತಷ್ಟು ಕುದಿಸಿ. ಅದನ್ನು ಫಿಲ್ಟರ್ ಮಾಡಿಕೊಂಡು ಬಿಸಿಯಾಗಿ ಸೇವಿಸಿ. ಲೆಮನ್ ಗ್ರಾಸ್ ಚಹಾವನ್ನು ಹೆಚ್ಚೆಂದರೆ ದಿನಕ್ಕೆ ಎರಡು ಬಾರಿ ಕುಡಿಯಬಹುದು. ಅದಕ್ಕಿಂತ ಜಾಸ್ತಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಯಾಗಬಹುದು.