ಫಿಟ್ ಆಗಿರಬೇಕು ಅನ್ನೋದು ಎಲ್ಲರ ಆಸೆ. ಯಾಕಂದ್ರೆ ಸ್ಥೂಲಕಾಯ ಮತ್ತು ಬೊಜ್ಜಿನಿಂದ ಹಲವಾರು ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು. ಈಗಾಗ್ಲೇ ನಿಮ್ಮ ತೂಕ ಹೆಚ್ಚಾಗಿದ್ದು, ಅದನ್ನು ಇಳಿಸಲು ಬಯಸಿದ್ರೆ ನಿಮ್ಮ ಪ್ರತಿನಿತ್ಯದ ಡಯಟ್ನಲ್ಲಿ ಕುಂಬಳಕಾಯಿ ರಸವನ್ನು ಸೇರಿಸಿಕೊಳ್ಳಬೇಕು.
ಕುಂಬಳಕಾಯಿಯಲ್ಲಿ ಜೀವಸತ್ವಗಳು, ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹೇರಳವಾಗಿವೆ. ಕುಂಬಳಕಾಯಿಯು ಸಾಕಷ್ಟು ಪ್ರಮಾಣದ ವಿಟಮಿನ್ ಡಿಯನ್ನು ಸಹ ಹೊಂದಿದೆ. ಹಾಗಾಗಿ ಕುಂಬಳಕಾಯಿ ಸೇವನೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಕುಂಬಳಕಾಯಿ ಜ್ಯೂಸ್ ಮಾಡೋದು ಕೂಡ ಬಹಳ ಸರಳ.
ಮಾಗಿದ ಕುಂಬಳಕಾಯಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಸಿಪ್ಪೆಯನ್ನು ತೆಗೆದು ಹಾಕಿಬಿಡಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಅಥವಾ ಓವನ್ನಲ್ಲಿಟ್ಟು ಬೇಯಸಿ. ನಂತರ ಅದನ್ನು ಮಿಕ್ಸರ್ನಲ್ಲಿ ರುಬ್ಬಿಕೊಂಡು ಫಿಲ್ಟರ್ ಮಾಡಿ. ಅದಕ್ಕೆ ಸ್ವಲ್ಪ ಸೇಬಿನ ಚೂರುಗಳನ್ನು ಸೇರಿಸಿ. ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿ. ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನವಾಗುತ್ತದೆ. ಇದರಲ್ಲಿರುವ ಫೈಬರ್ ಪ್ರಮಾಣವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ನಿಮ್ಮ ಜೀರ್ಣಕ್ರಿಯೆಯು ಉತ್ತಮವಾಗಿದ್ದರೆ ಸಹಜವಾಗಿಯೇ ತೂಕ ಕಡಿಮೆಯಾಗುತ್ತದೆ. ಹಾಗಾಗಿ ನಿಯಮಿತವಾಗಿ ಕುಂಬಳಕಾಯಿ ಜ್ಯೂಸ್ ಸೇವನೆ ಮಾಡಿ. ಕುಂಬಳಕಾಯಿ ರಸವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ.