ವ್ಯಕ್ತಿಯ ಅದೃಷ್ಟ ಯಾವಾಗ ಬೇಕಾದ್ರೂ ಬದಲಾಗಬಹುದು. ಯಾವಾಗ ಬೇಕಾದ್ರೂ ಪ್ರಗತಿಯಾಗಬಹುದು. ಶ್ರೀಮಂತ ಒಂದೇ ಬಾರಿ ಬಡವನಾಗ್ತಾನೆ. ಬೀದಿಯಲ್ಲಿ ಬಿದ್ದವ ಮಹಡಿ ಏರ್ತಾನೆ. ಇದೆಲ್ಲವೂ ಕರ್ಮ ಫಲ. ಅದೃಷ್ಟ ಸದಾ ನಮ್ಮ ಜೊತೆ ಇರಬೇಕಾದಲ್ಲಿ ಪ್ರತಿನಿತ್ಯ ಕೆಲವೊಂದು ನಿಯಮಗಳನ್ನು ನಾವು ಪಾಲಿಸಬೇಕು.
ಈ ಹಿಂದೆ ಹೇಳಿದಂತೆ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಎರಡೂ ಹಸ್ತದ ರೇಖೆಗಳನ್ನು ನೋಡಿಕೊಳ್ಳಿ. ಕೈನ ರೇಖೆಯಲ್ಲಿ ಲಕ್ಷ್ಮಿ ನೆಲೆಸಿದ್ದು, ಬೆಳಗಿನ ಆರಂಭ ಶುಭವಾಗಿರುತ್ತದೆ.
ಮನೆಯನ್ನು ಸದಾ ಸ್ವಚ್ಛವಾಗಿಡಿ. ಪ್ರತಿದಿನ ಬೆಳಿಗ್ಗೆ ಮನೆಯನ್ನು ಸ್ವಚ್ಛಗೊಳಿಸಿ. ಸೂರ್ಯಾಸ್ತದ ನಂತ್ರ ಪೊರಕೆ ಹಿಡಿಯಬೇಡಿ.
ಪ್ರತಿದಿನ ದೇವಸ್ಥಾನಕ್ಕೆ ಹೋಗಿ. ಸಾಧ್ಯವಾಗದಿದ್ದಲ್ಲಿ ಏಕಾದಶಿಯಂದು ಅವಶ್ಯವಾಗಿ ಹೋಗಿ.
ಅಶ್ವತ್ಥ ಮರದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ನೆಲೆಸಿರುತ್ತಾರೆ. ಹಾಗಾಗಿ ಇದಕ್ಕೆ ಪ್ರತಿದಿನ ಒಂದು ಲೋಟ ನೀರು ಹಾಕಿ. ಭಾನುವಾರ ಹೊರತುಪಡಿಸಿ ಉಳಿದ ದಿನ ಈ ಕೆಲಸ ಮಾಡಿದ್ರೆ ಶುಭ.
ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಿಸಿ. ಮುಖ್ಯ ಕೆಲಸಕ್ಕೆ ಹೋಗುವ ಮೊದಲು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಮನೆ ಬಿಡಿ. ಜಾತಕದಲ್ಲಿ ಗ್ರಹಗಳ ಸಮಸ್ಯೆ ಇದ್ದಲ್ಲಿ ಗಮನ ನೀಡಿ.
ಪ್ರತಿದಿನ ಊಟಕ್ಕೂ ಮೊದಲು ಒಂದು ಭಾಗವನ್ನು ಹಸುವಿಗೆ ಇನ್ನೊಂದು ಭಾಗವನ್ನು ನಾಯಿಗೆ ಹಾಗೂ ಮತ್ತೊಂದು ಭಾಗವನ್ನು ಕಾಗೆಗೆ ನೀಡಿ.