ಭಾರತದ ಈಶಾನ್ಯ ಭಾಗದಲ್ಲಿರುವ ಮಿಜೋರಾಂನ ಐಜಾಲ್ ಪ್ರದೇಶ ರಾಜ್ಯ ರಾಜಧಾನಿ ಎಂದು ಹೆಸರು ಪಡೆದಿರೋದ್ರ ಜೊತೆಗೆ ತನ್ನ ಪ್ರಕೃತಿ ಸೌಂದರ್ಯದ ಮೂಲಕವೂ ಪ್ರಸಿದ್ಧಿ ಪಡೆದಿದೆ. ಐಜಾಲ್ನಲ್ಲಿರುವ ತ್ಲಾಂಗ್ ನದಿ, ದುರ್ತಲಾಂಗ್ ಶಿಖರ ಸೇರಿದಂತೆ ಇನ್ನೂ ಹಲವು ಪ್ರದೇಶಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ.
ಐಜಾಲ್ನಲ್ಲಿರುವ ಪ್ರವಾಸಿ ತಾಣಗಳು ಒಂದೆರಡಲ್ಲ. ಟಾಮ್ ಡಿಲ್ ಸರೋವರದಲ್ಲಿ ನೀವು ದೋಣಿ ವಿಹಾರ ಮಾಡಬಹುದಾಗಿದೆ. ಇದು ಮಾತ್ರವಲ್ಲದ ವಾಂಟಾವಾಂಗ್ ಜಲಾಪಾತ ಕೂಡ ಪ್ರವಾಸಿಗರ ಫೇವರಿಟ್ ಸ್ಪಾಟ್. ಚಿಮ್ಟುಯ್ ಪುಯ್ ನದಿ ಮೀನುಗಾರಿಕೆ ಮಾಡುವವರಿಗೆ ಹೇಳಿ ಮಾಡಿಸಿದ ಸ್ಥಳ. ತ್ಲಾಂಗ್ ಸರೋವರವನ್ನಂತೂ ನೋಡೋದೇ ಕಣ್ಣಿಗೆ ಪರಮನಾಂದ.
ಇದು ಮಾತ್ರವಲ್ಲದೇ ರಂಗಡಿಲ್ ಕೆರೆ, ಸೋಲೋಮನ್ ಮಂದಿರ, ಮಿಜೊರಾಂ ರಾಜ್ಯ ಮ್ಯೂಸಿಯಂ, ರೀಕ್ಗ್ರಾಮ ಇವೆಲ್ಲವೂ ಪ್ರವಾಸಿಗರ ನೋಡಬಹುದಾದ ಅತ್ಯಾಕರ್ಷಕ ಸ್ಥಳಗಳಾಗಿದೆ.
ಈ ಸ್ಥಳಕ್ಕೆ ಅತೀ ಹತ್ತಿರ ಇರುವ ರೈಲು ನಿಲ್ದಾಣವೆಂದರೆ ಸಿಲ್ಚಾರ್. ಇದು 184 ಕಿಲೋಮೀಟರ್ ದೂರದಲ್ಲಿದ್ದು ಇಲ್ಲಿಂದ ಹೆದ್ದಾರಿ ಮೂಲಕ ಐಜಾಲ್ ಸುಲಭವಾಗಿ ತಲುಪಬಹುದಾಗಿದೆ. ಇದನ್ನ ಹೊರತುಪಡಿಸಿದ್ರೆ ಕೋಲ್ಕತ್ತಾ ಇಲ್ಲವೇ ಗುವಾಹಟಿಯಿಂದ ವಿಮಾನವನ್ನೇರಿ ಈ ನಗರವನ್ನ ತಲುಪಬಹುದು.