ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಸಾವನದುರ್ಗ ಗಿರಿಧಾಮವು, ತನ್ನ ಪ್ರಕೃತಿ ಸೌಂದರ್ಯದಿಂದ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಕರಿಗುಡ್ಡ ಮತ್ತು ಬಿಳಿಗುಡ್ಡಗಳು ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದು ಡೆಕ್ಕನ್ ತಪ್ಪಲಿಗಿಂತ 1226 ಮೀಟರ್ ಗಳಷ್ಟು ಎತ್ತರದಲ್ಲಿದೆ.
ಬೃಹದಾಕಾರದ ಬಂಡೆಗಳು, ಗ್ರಾನೈಟ್ ಹಾಗು ಲ್ಯಾಟೆರೈಟ್ ಗಳಿಂದ ಇದು ನಿರ್ಮಿತವಾಗಿದ್ದು, ಅತ್ಯಂತ ಕಡಿದಾಗಿರುವುದರಿಂದ ಏರಲು ಕಷ್ಡಕರವಾಗಿದೆ, ಹಾಗಿದ್ದರೂ ಕೂಡ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬೆಟ್ಟ ಹತ್ತುವ ಆಸಕ್ತಿ ಇರುವವರು ಸಹ ಇಲ್ಲಿಗೆ ಆಗಮಿಸುತ್ತಾರೆ ಜೊತೆಗೆ ದೇವಾಲಯಗಳಿಗೆ ಭೇಟಿ ಕೊಡುತ್ತಾರೆ. ಇಲ್ಲಿರುವ ಗುಡ್ಡದ ಕೆಳಗೆ ವೀರಭದ್ರೇಶ್ವರ ಸ್ವಾಮಿ ಹಾಗು ನರಸಿಂಹಸ್ವಾಮಿ ದೇವಾಲಯವಿದೆ.
ನೀವೇನಾದರೂ ವಾಯುವಿಹಾರಕ್ಕೆ ಹೋಗಬಯಸಿದಲ್ಲಿ ಬೆಸ್ಟ್ ಪ್ಲೇಸ್ ಇದಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿದ್ದು, ಅಪರೂಪದ ಮರಗಳು ಮತ್ತು ಬುಲ್ ಬುಲ್ ಪಕ್ಷಿಗಳನ್ನು ಸಹ ಕಾಣಬಹುದು. ಬೆಂಗಳೂರಿನಿಂದ ಮಾಗಡಿಗೆ ಬಸ್ಸಿನಲ್ಲಿ ತೆರಳಿ ಅಲ್ಲಿಂದ ಸಾವನದುರ್ಗಕ್ಕೆ ತೆರಳಬೇಕಾಗುತ್ತದೆ. ಕೇವಲ ಎರಡು ತಾಸಿನ ಪ್ರಯಾಣವಾಗಿದ್ದು, ಸ್ಥಳೀಯ ಬಸ್ಸುಗಳು ಮತ್ತು ಆಟೋಗಳ ಮೂಲಕ ಹೋಗಬಹುದು.