ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಮಾಜಿ ಸಚಿವ ಈಶ್ವರಪ್ಪನವರ ಶಿವಮೊಗ್ಗ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ತಮ್ಮ ಪತ್ನಿ, ಉತ್ತರ ಹಾಗೂ ಕುಟುಂಬ ಸದಸ್ಯರಿಗೆ ಸಿಹಿ ತಿನ್ನಿಸಿ ಈಶ್ವರಪ್ಪ ಸಂಭ್ರಮಿಸಿದ್ದಾರೆ.
ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಈಶ್ವರಪ್ಪನವರ ನಿವಾಸಕ್ಕೆ ಆಗಮಿಸಿ ಅಭಿನಂದಿಸಿದ್ದಾರೆ. ಅಲ್ಲದೆ ಮಠಾಧೀಶರು ಕೂಡ ಕರೆ ಮಾಡಿ ಶುಭಾಶಯ ತಿಳಿಸಿದರು ಎಂದು ಹೇಳಲಾಗಿದೆ.
ತಮಗೆ ಕ್ಲೀನ್ ಚಿಟ್ ಸಿಕ್ಕ ಕುರಿತಂತೆ ಮಾತನಾಡಿದ ಈಶ್ವರಪ್ಪ, ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ನನಗೆ ಮೊದಲೇ ಗೊತ್ತಿತ್ತು. ಮನೆ ದೇವರಾದ ತಾಯಿ ಚೌಡೇಶ್ವರಿ ಆಶೀರ್ವಾದದಿಂದ ನಾನು ಆರೋಪ ಮುಕ್ತನಾಗಿದ್ದೇನೆ ಎಂದು ಹೇಳಿದರು.