ಪ್ಯಾರಾಸೈಲಿಂಗ್ ಹಗ್ಗ ತುಂಡಾಗಿ ಮಹಿಳೆಯರಿಬ್ಬರು ಸಮುದ್ರಕ್ಕೆ ಬೀಳುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲಿಬಾಗ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರಿದ್ದ ಪ್ಯಾರಾಸೈಲಿಂಗ್ ಪ್ಯಾರಾಚೂಟ್ ಹಗ್ಗ ತುಂಡಾಗಿ ಅಪಘಾತ ಸಂಭವಿಸಿದೆ. ಪ್ಯಾರಾಸೈಲಿಂಗ್ ರೈಡ್‌ಗೆ ಮಹಿಳೆಯರು ಸಜ್ಜಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ಯಾರಾಚೂಟ್‌ಗೆ ಜೋಡಿಸಲಾದ ಹಗ್ಗವು ದೋಣಿಯಿಂದ ಬಿಟ್ಟು ಮೇಲೆ ಹಾರುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ನಂತರ ಏಕಾಏಕಿ ಹಗ್ಗ ಕಟ್ಟಾಗಿದ್ದು, ಇಬ್ಬರು ಮಹಿಳೆಯರೂ ಸಾಗರಕ್ಕೆ ಧುಮುಕಿದ್ದಾರೆ.
ಈ ವಿಡಿಯೋವನ್ನು 4.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಈ ಅಪಘಾತದ ಬಗ್ಗೆ ಕೆಲವರು ಆಘಾತಕ್ಕೊಳಗಾಗಿದ್ದರೆ, ಇತರರು ತಮ್ಮ ಸೇವೆಗಳನ್ನು ಪ್ರವಾಸಿಗರಿಗೆ ನೀಡುವ ಮೊದಲು ಈ ಸಾಹಸ ಕ್ರೀಡೆಗಳ ಭದ್ರತಾ ಪರಿಶೀಲನೆಗಳನ್ನು ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಇಬ್ಬರು ಮಹಿಳೆಯರು ಮುಂಬೈನ ಸಾಕಿ ನಾಕಾ ನಿವಾಸಿಗಳಾಗಿದ್ದು, ಕುಟುಂಬ ವಿಹಾರಕ್ಕಾಗಿ ಅಲಿಬಾಗ್‌ಗೆ ಬಂದಿದ್ದರು.
https://www.youtube.com/watch?v=exzq9nUVU3E