
ಗ್ರಾಹಕರಿಗಾಗಿ ಅಂಚೆ ಕಚೇರಿಯಲ್ಲಿ ಹಲವು ವಿಶೇಷ ಯೋಜನೆಗಳಿವೆ. ಇವುಗಳಲ್ಲಿ ಅಲ್ಪ ಹೂಡಿಕೆ ಮಾಡಿ ಲಕ್ಷಗಟ್ಟಲೆ ಲಾಭ ಪಡೆಯಬಹುದು. ಅಂಥದ್ದೇ ಸರ್ಕಾರಿ ಯೋಜನೆಯಲ್ಲಿ 35 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಅಪಾಯವಿಲ್ಲದೆ ಮಿಲಿಯನೇರ್ ಆಗಲು ಬಯಸಿದರೆ ಇದು ಬೆಸ್ಟ್ ಪ್ಲಾನ್. ಯಾಕಂದ್ರೆ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಎಫ್‌ಡಿಗಳನ್ನು ಹೂಡಿಕೆಗೆ ಉತ್ತಮ ಆಯ್ಕೆಗಳೆಂದು ಪರಿಗಣಿಸಲಾಗುತ್ತದೆ.
ಅಂಚೆ ಕಚೇರಿಯ ಈ ಯೋಜನೆಯ ಹೆಸರು ಗ್ರಾಮ ಸುರಕ್ಷಾ ಯೋಜನೆ. ಇದರಲ್ಲಿ ನೀವು ಸರ್ಕಾರದಿಂದ ಸಂಪೂರ್ಣ 35 ಲಕ್ಷ ರೂಪಾಯಿ ಪಡೆಯಬಹುದು. ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿ ತಿಂಗಳು 1500 ರೂಪಾಯಿ ಜಮಾ ಮಾಡಿದ್ರೆ ನಂತರ ಲಕ್ಷಗಟ್ಟಲೆ ಹಣ ನಿಮ್ಮ ಕೈಸೇರುತ್ತದೆ. ಈ ಯೋಜನೆಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡಿದರೆ ಮುಂಬರುವ ಸಮಯದಲ್ಲಿ 31 ಲಕ್ಷದಿಂದ 35 ಲಕ್ಷದವರೆಗೂ ಲಾಭ ಪಡೆಯುತ್ತೀರಿ.
ಲಾಭ ಪಡೆಯುವುದು ಹೇಗೆ ?
ಒಬ್ಬ ವ್ಯಕ್ತಿ 19 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂಪಾಯಿಗಳ ಪಾಲಿಸಿಯನ್ನು ಖರೀದಿಸಿದರೆ, ನಂತರ 55 ವರ್ಷಗಳವರೆಗೆ ಅವನ ಮಾಸಿಕ ಪ್ರೀಮಿಯಂ 1515 ರೂಪಾಯಿ ಆಗಿರುತ್ತದೆ. 58 ವರ್ಷಕ್ಕೆ 1463 ಮತ್ತು 60 ವರ್ಷಕ್ಕೆ 1411 ರೂಪಾಯಿ ಆಗಿರುತ್ತದೆ. ಪಾಲಿಸಿದಾರರು 55 ವರ್ಷಗಳಿಗೆ 31.60 ಲಕ್ಷ ರೂಪಾಯಿ, 58 ವರ್ಷಗಳಿಗೆ 33.40 ಲಕ್ಷ ಮತ್ತು 60 ವರ್ಷಗಳಿಗೆ 34.60 ಲಕ್ಷ ರೂಪಾಯಿಗಳಷ್ಟು ಮೆಚ್ಯುರಿಟಿ ಲಾಭವನ್ನು ಪಡೆಯುತ್ತಾರೆ.
ಹೂಡಿಕೆಯ ನಿಯಮಗಳು…
19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರೂಪಾಯಿಗಳಿಂದ 10 ಲಕ್ಷ ರೂಪಾಯಿ ಆಗಿರುತ್ತದೆ. ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು. ಪ್ರೀಮಿಯಂ ಪಾವತಿಸಲು ನೀವು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು. ಈ ಯೋಜನೆಯನ್ನು ತೆಗೆದುಕೊಂಡ 3 ವರ್ಷಗಳ ನಂತರ ಅದನ್ನು ಒಪ್ಪಿಸಲು ಅವಕಾಶವಿದೆ.