ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ ಸ್ಕೀಮ್‌ಗಳಿವೆ. ಅಂಚೆ ಕಚೇರಿಯ ಯೋಜನಗೆಳಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂತಹ ಸರ್ಕಾರಿ ಯೋಜನೆ ಬಗ್ಗೆ ತಿಳಿದುಕೊಳ್ಳೋಣ. ಇದರಲ್ಲಿ ನೀವು ಹಾಕಿದ ಹಣ ದುಪ್ಪಟ್ಟಾಗುತ್ತದೆ. ಪೋಸ್ಟ್ ಆಫೀಸ್‌ನ ಈ ಸ್ಕೀಮ್‌ನಲ್ಲಿ ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ 10 ಲಕ್ಷ ರೂಪಾಯಿ ಸಿಗುತ್ತವೆ.
ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ, ಇದರಲ್ಲಿ ನೀವು ದುಪ್ಪಟ್ಟು ಹಣವನ್ನು ಪಡೆಯುತ್ತೀರಿ. ನಿಮ್ಮ ಮೊತ್ತವು 123 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂಚೆ ಕಚೇರಿಗೆ ವಿಸಿಟ್ ಮಾಡಿ, ಈ ಯೋಜನೆಯ ಖಾತೆ ತೆರೆಯಬಹುದು. ಇದರಲ್ಲಿ ಜಂಟಿ ಖಾತೆಯನ್ನು ಹೊಂದಲು ಸಹ ಅವಕಾಶವಿದೆ. ಪ್ರಸ್ತುತ ಹೂಡಿಕೆದಾರರು ಈ ಯೋಜನೆಯಲ್ಲಿ ಶೇ.6.9ರಷ್ಟು ಬಡ್ಡಿ ಪಡೆಯುತ್ತಿದ್ದಾರೆ. ಯೋಜನೆಯಲ್ಲಿ ನೀವು ಕನಿಷ್ಟ 1000 ರೂಪಾಯಿಯನ್ನು ಕೂಡ ಹೂಡಿಕೆ ಮಾಡಲು ಅವಕಾಶವಿದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ.
123 ತಿಂಗಳವರೆಗೆ 5 ಲಕ್ಷವನ್ನು ಹೂಡಿಕೆ ಮಾಡಿದರೆ, ಶೇ.6.9 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಅಂದರೆ ಮೆಚ್ಯೂರಿಟಿಯ ಮೇಲಿನ ಅಸಲು ಮೊತ್ತದ ಜೊತೆಗೆ ಬಡ್ಡಿಯ ಲಾಭವನ್ನೂ ಪಡೆಯಬಹುದು. ಕೇಂದ್ರ ಸರ್ಕಾರದ ಪರವಾಗಿ ಈ ಯೋಜನೆಯಲ್ಲಿ ಬಡ್ಡಿಯ ಲಾಭವನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ. ಹೂಡಿಕೆಯ ಸಮಯದಲ್ಲಿ ಬಡ್ಡಿದರಗಳಲ್ಲಿ ಬದಲಾವಣೆಯಾಗಿದ್ದರೆ, ನೀವು ಕಡಿಮೆ ಅಥವಾ ಹೆಚ್ಚಿನ ಲಾಭವನ್ನು ಪಡೆಯಬಹುದು.