alex Certify ಪೋಷಕಾಂಶ ಕೊರತೆ ನೀಗಿಸುವ ‘ಸಾರವರ್ಧಿತ ಅಕ್ಕಿ’ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶ ಕೊರತೆ ನೀಗಿಸುವ ‘ಸಾರವರ್ಧಿತ ಅಕ್ಕಿ’ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಆಹಾರದ ಜೊತೆಗೆ ಪೋಷಣೆಯ ಭದ್ರತೆಯನ್ನು ಒದಗಿಸುವ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಪಡಿತರ ವ್ಯವಸ್ಥೆ ಮೂಲಕ ಪೋಷಕಾಂಶದ ಕೊರತೆ ನೀಗಿಸುವ ಸಾರವರ್ಧಿತ ಅಕ್ಕಿಯನ್ನು ವಿತರಿಸಲು ಕ್ರಮ ಕೈಗೊಂಡಿದ್ದು, 2024ರ ವೇಳೆಗೆ ಇಡೀ ದೇಶದಾದ್ಯಂತ ಇದು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದಲ್ಲೂ ಸಹ ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೇ ತಿಂಗಳಿನಿಂದಲೇ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ಸಾರವರ್ಧಿತ ಅಕ್ಕಿಯನ್ನು ಅನೇಕರು ಪ್ಲಾಸ್ಟಿಕ್ ಅಕ್ಕಿ ಎಂಬ ಗೊಂದಲಕೊಳಗಾಗಿದ್ದು, ಈ ಕುರಿತು ಬಹು ಮುಖ್ಯವಾದ ಮಾಹಿತಿ ಇಲ್ಲಿದೆ. ಸಾರವರ್ಧಿತ ಅಕ್ಕಿ ಪ್ರಯೋಗಾಲಯ ಮಾನ್ಯತೆ ಪಡೆದಿದ್ದು, ಜೊತೆಗೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಸೇರಿದಂತೆ ಎಲ್ಲ ಅಗತ್ಯ ರೀತಿಯ ನಿಯಮಾವಳಿಗಳನ್ನು ಅನುಸರಿಸಿ ತಯಾರಿಸಲಾಗಿದೆ.

ಅವಶ್ಯಕ ವಿಟಮಿನ್, ಮಿನರಲ್ ಮತ್ತು ಇತರೆ ಪೋಷಕಾಂಶಗಳನ್ನು ಮಿಶ್ರಣಗೊಳಿಸಿ ಮಷಿನ್ ನಲ್ಲಿ ಅಕ್ಕಿ ತಯಾರಿಸಿ ನೀಡುವ ವ್ಯವಸ್ಥೆ ಇದಾಗಿದ್ದು, ಇದರ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಪೋಷಕಾಂಶ ಕೊರತೆ ಇರುವವರಿಗೆ ಈ ಅಕ್ಕಿ ಸೇವನೆಯಿಂದ ಇದರ ಕೊರತೆ ನೀಗಲಿದೆ. ಈ ಅಕ್ಕಿ ಚೀಲದ ಮೇಲೆ + ಎಫ್ ಎಂಬ ನೀಲಿ ಬಣ್ಣದ ಚಿಹ್ನೆ ಇರಲಿದ್ದು, ಇದರಿಂದ ಸಾರ್ವಜನಿಕರು ಸುಲಭವಾಗಿ ಗುರುತಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...