ರಾಗಿ ಹಿಟ್ಟು- 3/4 ಬೌಲ್
ಎಣ್ಣೆ – ಬಳಿಯಲು
ಹೆಚ್ಚಿಕೊಂಡ ಈರುಳ್ಳಿ- 2
ನೀರು- ಮಿಶ್ರಗೊಳಿಸಲು
ಕೊತ್ತಂಬರಿ ಸೊಪ್ಪು – 1/2 ಕಪ್
ಹಸಿಮೆಣಸಿನ ಕಾಯಿ- 5-6
ಜೀರಿಗೆ -1 ಚಮಚ
ಉಪ್ಪು -1/2 ಚಮಚ
ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಸೇರಿಸಿ. ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ.
ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆಯ ಆಕಾರದಲ್ಲಿ ಮಾಡಿಕೊಳ್ಳಿ. ಬಳಿಕ ನಾನ್ ಸ್ಟಿಕ್ ಪೇಪರ್ ತೆಗೆದುಕೊಂಡು, ಎಣ್ಣೆಯನ್ನು ಸವರಿ ಹಿಟ್ಟಿನ ಉಂಡೆಯನ್ನು ಅದರ ಮೇಲಿಟ್ಟು, ಕೈಯಿಂದ ತಟ್ಟಿ. ನಂತರ ಮೂರು ರಂಧ್ರವನ್ನು ಮಾಡಿದರೆ ರೊಟ್ಟಿ ಚೆನ್ನಾಗಿ ಬೇಯುತ್ತದೆ.
ತವಾ ಅಥವಾ ಬಾಣಲೆಯ ಮೇಲೆ ಎರಡು ಟೇಬಲ್ ಚಮಚ ಎಣ್ಣೆಯನ್ನು ಸವರಿ, ತಟ್ಟಿಕೊಂಡ ರೊಟ್ಟಿಯನ್ನು ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಿ. ಬೆಂದ ನಂತರ ಒಂದು ಪ್ಲೇಟ್ಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ರೊಟ್ಟಿ ಸವಿಯಲು ನೀಡಿ.