alex Certify ಪೋಷಕಾಂಶಗಳ ಗಣಿ ಈ ಕ್ಯಾರೆಟ್‌ ಜ್ಯೂಸ್‌; ತೂಕ ಇಳಿಸುವುದರ ಜೊತೆಗೆ ನೀಡುತ್ತೆ ಇಷ್ಟೆಲ್ಲಾ ಪ್ರಯೋಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶಗಳ ಗಣಿ ಈ ಕ್ಯಾರೆಟ್‌ ಜ್ಯೂಸ್‌; ತೂಕ ಇಳಿಸುವುದರ ಜೊತೆಗೆ ನೀಡುತ್ತೆ ಇಷ್ಟೆಲ್ಲಾ ಪ್ರಯೋಜನ….!

ಚಳಿಯಿರಲಿ ಅಥವಾ ಸೆಖೆಯೇ ಇರಲಿ, ಕ್ಯಾರೆಟ್‌ ಅನ್ನು ಎಲ್ಲಾ ಋತುವಿನಲ್ಲೂ ತಿನ್ನಬಹುದು. ನಮ್ಮ ದೇಹದಲ್ಲಿನ ರಕ್ತದ ಕೊರತೆಯನ್ನು ಕ್ಯಾರೆಟ್ ಹೋಗಲಾಡಿಸುತ್ತದೆ. ರಕ್ತಹೀನತೆಗೆ ಕ್ಯಾರೆಟ್ ಪ್ರಯೋಜನಕಾರಿ ಜೊತೆಗೆ ಇದನ್ನು ಸೇವಿಸುವುದರಿಂದ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ. ವ್ಯಕ್ತಿಯ ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗಿದ್ದರೆ, ಅದನ್ನು ಕಡಿಮೆ ಮಾಡಲು ಕ್ಯಾರೆಟ್‌ ಸಹಾಯ ಮಾಡುತ್ತದೆ.

ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಸಿ, ಕೆ, ಬಿ8, ಸತು, ಕಬ್ಬಿಣ ಸೇರಿದಂತೆ ಹಲವು ಪೋಷಕಾಂಶಗಳಿವೆ. ಕೆಲವರಿಗೆ ಕ್ಯಾರೆಟ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥವರು ಕ್ಯಾರೆಟ್‌ ಜ್ಯೂಸ್‌ ಕುಡಿಯಬಹುದು. ಕ್ಯಾರೆಟ್ ಜ್ಯೂಸ್‌ನಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ. ಇದರ ಬಳಕೆಯಿಂದ ಚರ್ಮಕ್ಕೆ ಹೆಚ್ಚಿನ ಹೊಳಪು ಬರುತ್ತದೆ. ಕ್ಯಾರೆಟ್‌ ಜ್ಯೂಸ್‌ ಕುಡಿಯುವುದರಿಂದ ಮುಖದಲ್ಲಿನ ಮೊಡವೆ ಮತ್ತು ಕಪ್ಪು ಕಲೆಗಳು ಮಾಯವಾಗುತ್ತವೆ.

ಕಣ್ಣಿನ ದೃಷ್ಟಿಹೀನತೆಯಿಂದ ಬಳಲುತ್ತಿರುವವರಿಗೆ ಕ್ಯಾರೆಟ್ ಜ್ಯೂಸ್ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ದೃಷ್ಟಿಶಕ್ತಿಯನ್ನು ಸುಧಾರಿಸುತ್ತದೆ. ಕ್ಯಾರೆಟ್ ಜ್ಯೂಸ್ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಕ್ಯಾರೆಟ್‌ ಜ್ಯೂಸ್‌ ಕುಡಿಯಬೇಕು. ಇದರಿಂದ ದೇಹದಲ್ಲಿ ರಕ್ತವು ವೇಗವಾಗಿ ರೂಪುಗೊಳ್ಳುತ್ತದೆ. ನಾರಿನಂಶ ಯಥೇಚ್ಛವಾಗಿ ದೊರೆಯುತ್ತದೆ. ಆದ್ದರಿಂದ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಬೀಟಾ ಕ್ಯಾರೋಟಿನ್ ಕ್ಯಾರೆಟ್ ಜ್ಯೂಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ನಿಮ್ಮನ್ನು ಒತ್ತಡ ಮತ್ತು ಆತಂಕದಿಂದ ಮುಕ್ತಗೊಳಿಸುತ್ತದೆ. ದೇಹದಲ್ಲಿ ಹೆಚ್ಚುತ್ತಿರುವ ಖಿನ್ನತೆಯ ಲಕ್ಷಣಗಳಿಂದ ಪರಿಹಾರ ನೀಡುತ್ತದೆ. ಕ್ಯಾರೆಟ್ ಜ್ಯೂಸ್‌ಗೆ ಸಕ್ಕರೆ ಮತ್ತು ಕಾಳುಮೆಣಸು ಬೆರೆಸಿ ಕುಡಿಯುವುದರಿಂದ ಕಫದ ಸಮಸ್ಯೆ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...