ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ.
ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್ ಗಳು ದೊರೆಯುತ್ತವೆ. ವಿಟಮಿನ್ ಕೆ, ಸಿ ಮತ್ತು ಬಿ ದೇಹದ ಜೀರ್ಣತೆಯಲ್ಲಿ ಹಾಗೂ ಪಚನ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
ಮೊಳಕೆಯಲ್ಲಿನ ಹಲವು ವಿಟಮಿನ್ಗಳು ಹಾಗೂ ಮಿನರಲ್ಸ್ ಗಳು ಪ್ರೊಟೀನ್ ಜೊತೆಗೂಡಿ ಉತ್ತಮ ಪ್ರೊಟೀನ್ ಬಿಡುಗಡೆ ಮಾಡುತ್ತದೆ. ಇದರಿಂದ ದೇಹದ ಜೀವಕೋಶಗಳ ರಿಪೇರಿ ಕೆಲಸಗಳು ಸರಾಗವಾಗಿ ನಡೆಯುತ್ತದೆ.
ಮೊಳಕೆ ಬರಿಸುವುದರಿಂದ ಬೇಳೆ ಕಾಳುಗಳ ಪೋಷಕಾಂಶಗಳು ದ್ವಿಗುಣಗೊಳ್ಳುತ್ತವೆ. ಸ್ಥೂಲ ದೇಹದವರು ಪಥ್ಯ ಆಹಾರ ಸೇವಿಸುವಾಗ ಮೊಳಕೆ ಕಾಳುಗಳನ್ನು ಆಹಾರದಲ್ಲಿ ಅಳವಡಿಸಿಕೊಂಡರೆ ತೂಕ ಇಳಿಯುವುದರ ಜೊತೆಗೆ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ. ಅಧಿಕ ರಕ್ತದೊತ್ತಡದ ತೊಂದರೆ ಇರುವವರು ಕೂಡ ತಮ್ಮ ಆಹಾರ ಕ್ರಮದಲ್ಲಿ ಮೊಳಕೆ ಕಾಳುಗಳನ್ನು ಅಳವಡಿಸಿಕೊಳ್ಳಬಹುದು. ಬೆಳೆಯುವ ಮಕ್ಕಳು ಹಾಗೂ ಹದಿಹರೆಯದವರ ಆರೋಗ್ಯಕ್ಕೆ ಮೊಳಕೆ ಕಾಳುಗಳು ಬಹಳ ಪ್ರಯೋಜನಕಾರಿ.
ಮೊಳಕೆಯಲ್ಲಿ ವಿಟಮಿನ್ ಗಳು ಬೇಗ ಹಾಳಾಗುವುದರಿಂದ ತಾಜಾ ಇರುವಾಗಲೇ ಸೇವಿಸುವುದು ಉತ್ತಮ ಹಾಗೂ ಮೊಳಕೆಯನ್ನು ತಯಾರಿಸಲು ಬಳಸುವ ನೀರು ಶುದ್ಧವಾಗಿರಬೇಕು. ಇಲ್ಲದಿದ್ದರೆ ಕೆಟ್ಟ ಬ್ಯಾಕ್ಟೀರಿಯಾಗಳು ದೇಹಕ್ಕೆ ಸೇರಿ ಅನಾರೋಗ್ಯ ಉಂಟುಮಾಡುತ್ತದೆ. ಮೊಳಕೆ ಕಾಳುಗಳನ್ನು ಸಲಾಡ್ ರೂಪದಲ್ಲಿ ಬಳಸಬಹುದು. ಯಾವ ಆಹಾರದಲ್ಲೂ ಬೇಕಾದರೂ ಬಳಸಬಹುದು.