ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಿನಿಂದಲೂ ಮಕ್ಕಳ ಮೇಲಿನ ಪರಿಣಾಮದ ಬಗ್ಗೆ ಪೋಷಕರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ಹಾಗೂ ವೈದ್ಯಕೀಯ ವೃತ್ತಿಯಲ್ಲಿರುವವರು ಕಳವಳ ಹೊಂದಿದ್ದಾರೆ.
ಮಕ್ಕಳನ್ನು ವೈರಸ್ ನಿಂದ ರಕ್ಷಿಸುವ ಕುರಿತು ಅಧ್ಯಯನಗಳು ಕೂಡ ನಡೆದಿವೆ. ಜ್ವರದ ವಿರುದ್ಧ ನಿಮ್ಮ ಮಗುವಿಗೆ ಲಸಿಕೆ ಹಾಕುವುದು ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳನ್ನು ರಕ್ಷಿಸುವ ವಿಧಾನಗಳ ತುರ್ತು ಅವಶ್ಯಕತೆ ಇದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಕಳೆದ ಕೆಲವು ತಿಂಗಳ ಅವಧಿಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ವೈರಸ್ ನಿಂದ ರಕ್ಷಿಸಬಹುದೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಭರವಸೆ ಇಲ್ಲದಂತಾಗಿದೆ.
ಮುಲುಂಡ್ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ, ಮಕ್ಕಳ ವೈದ್ಯ ಡಾ. ಜೆಸಾಲ್ ಶೆತ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊದಲ ಅಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ಕೊರೋನಾ ತೀವ್ರ ಪರಿಣಾಮ ಬೀರಿದೆ ಎಂದು ಸಾಂಕ್ರಾಮಿಕ ರೋಗ ಶಾಸ್ತ್ರೀಯ ಅಧ್ಯಯನ ತಿಳಿಸಿದೆ. ಎರಡನೇ ಅಲೆಯಲ್ಲಿ ಯುವ ಪೀಳಿಗೆಯ ಮೇಲೆ ಕೊರೋನಾ ಪರಿಣಾಮ ಬೀರಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಯಸ್ಕರು ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ವಯೋಮಾನದವರಿಗೆ ಲಸಿಕೆ ಕೂಡ ನೀಡಲಾಗುತ್ತಿದೆ. ಆದರೆ, ಮಕ್ಕಳನ್ನು ನಿರ್ಲಕ್ಷಿಸಿದಂತಾಗಿದೆ. ಲಸಿಕೆ ಇಲ್ಲದ ಕಾರಣ ಮೂರನೇ ಅಲೆಯಲ್ಲಿ ಮಕ್ಕಳನ್ನು ರಕ್ಷಿಸುವ ಮತ್ತು ಅವರ ಅನಾರೋಗ್ಯದ ತೀವ್ರತೆಯನ್ನು ಕಡಿಮೆ ಮಾಡುವ ವಿಧಾನಗಳನ್ನು ಕಂಡುಕೊಳ್ಳುವ ತುರ್ತು ಅವಶ್ಯಕತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸಾಂಕ್ರಾಮಿಕ ರೋಗದ ಮೂರನೇ ಅಲೆಯಲ್ಲಿ ಮಕ್ಕಳಿಗೂ ವ್ಯಾಕ್ಸಿನೇಷನ್ ನೀಡುವಂತೆ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಶಿಫಾರಸು ಮಾಡಿದೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ವಾರ್ಷಿಕ ಫ್ಲೂ ಲಸಿಕೆ ನೀಡಲು ಸಲಹೆ ನೀಡಿದೆ.
ಅಮೆರಿಕದ ಮಿಚಿಗನ್ ಮತ್ತು ಮಿಸೌರಿಯಲ್ಲಿ ಕೊರೋನಾ ಸೋಂಕಿತ ಮಕ್ಕಳಲ್ಲಿ ನಡೆಸಿದ ಇತ್ತೀಚಿನ ಅಧ್ಯಯನಗಳ ಪ್ರಕಾರ, 2019-20 ರಲ್ಲಿ ಇನ್ ಫ್ಲುಯೆಂಜ ಲಸಿಕೆ ಪಡೆದ ಮಕ್ಕಳಿಗೆ ಕೊರೊನಾ ಅಪಾಯ ಸ್ವಲ್ಪ ಕಡಿಮೆ ಇರುವುದು ಕಂಡುಬಂದಿದೆ. ಫ್ಲೂ ಲಸಿಕೆ ಪಡೆದಿದ್ದ ಮಕ್ಕಳಿಗೆ ಸೋಂಕು ತೀವ್ರವಾದ ಕಾಯಿಲೆಯಿಂದ ಬಳಲುವ ಅಪಾಯ ಕಡಿಮೆಯಾಗಿದೆ.
ಕೋವಿಡ್ ತೀವ್ರತೆಯಿಂದ ಫ್ಲೂ ಶಾಟ್ ಮಕ್ಕಳನ್ನು ಹೇಗೆ ರಕ್ಷಿಸುತ್ತದೆ…?
SARS-CoV-2 ಮತ್ತು ಇನ್ ಫ್ಲುಯೆಂಜ ಒಂದೇ ರೀತಿಯ ಸಾಂಕ್ರಾಮಿಕ ಮತ್ತು ಕ್ಲಿನಿಕಲ್ ಲಕ್ಷಣಗಳನ್ನು ಹೊಂದಿವೆ. ಈಗಿರುವ ಕೊರೊನಾ ಬಿಕ್ಕಟ್ಟಿನೊಂದಿಗೆ, ಹೆಚ್ಚುವರಿ ಇನ್ ಫ್ಲುಯೆಂಜ ಫ್ಲೂ ಲಸಿಕೆ ಮಕ್ಕಳಿಗೆ ನೀಡುವುದರಿಂದ ಕೊರೊನಾ ವೈರಸ್ ವಿರುದ್ಧ ರಕ್ಷಣೆ ನೀಡಲಿದೆ. ಜೊತೆಗೆ ಲಸಿಕೆಯಿಂದ ಪ್ರಯೋಜನವಾಗಲಿದ್ದು, ಸೋಂಕಿನ ಅಪಾಯವನ್ನು ತಡೆಯುತ್ತದೆ.
ಅಲ್ಲದೆ, ವ್ಯಾಕ್ಸಿನೇಷನ್ ಮೂಲಕ ಮಕ್ಕಳಲ್ಲಿ ಇನ್ ಫ್ಲುಯೆಂಜ ಸೋಂಕನ್ನು ತಡೆಗಟ್ಟುವುದರ ಜೊತೆಗೆ ಕೊರೊನಾ ಸೋಂಕಿನ ಪರೀಕ್ಷೆಯ ಅಗತ್ಯ ಕಡಿಮೆಯಾಗಲು ಕಾರಣವಾಗುತ್ತದೆ, ಆರೋಗ್ಯ ಹೊರೆಯನ್ನೂ ಕಡಿಮೆ ಮಾಡುತ್ತದೆ. ಅಲ್ಲದೇ ಆರೋಗ್ಯ ಸಂಪನ್ಮೂಲಗಳ ಹೆಚ್ಚಿನ ಹೊರೆಯಾಗುವುದಿಲ್ಲ. ಹೀಗಾಗಿ ಮಹಾರಾಷ್ಟ್ರದ ಪೀಡಿಯಾಟ್ರಿಕ್ ಟಾಸ್ಕ್ ಫೋರ್ಸ್ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಶಿಫಾರಸು ಮಾಡಿದೆ, ಇನ್ ಫ್ಲುಯೆಂಜ ವಿರುದ್ಧದ ಮಕ್ಕಳ ರೋಗನಿರೋಧಕ ಶಕ್ತಿ ಸಂಭವನೀಯ ಕೊರೊನಾ ಮೂರನೇ ತರಂಗದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಕ್ಕಳು ಫ್ಲೂ ಮತ್ತು ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಬಹುದೇ…?
ಫ್ಲೂ ಲಸಿಕೆ ಮತ್ತು ಕೋವಿಡ್ ಲಸಿಕೆ ವಿಭಿನ್ನವಾಗಿವೆ. ಎರಡು ಲಸಿಕೆಗಳ ನಡುವೆ ನಾಲ್ಕು ವಾರಗಳ ಅಂತರವನ್ನು ಕಾಪಾಡಿಕೊಳ್ಳಬೇಕಾದರೆ ಮಗುವಿಗೆ ಪ್ರತಿಕಾಯಗಳು ಅಭಿವೃದ್ಧಿಯಾಗಲು ಸಾಕಷ್ಟು ಸಮಯ ಸಿಗುತ್ತದೆ. ವೈರಲ್ ವಿರುದ್ಧ ಎಲ್ಲಾ ರೀತಿಯ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.