ಸಿಹಿ-ತಿಂಡಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಅದ್ರಲ್ಲೂ ಮಕ್ಕಳಂತೂ ಊಟ ಮಾಡದೆ ಬರೇ ಸಿಹಿ ತಿನಿಸನ್ನೇ ತಿನ್ನುತ್ತಾರೆ. ಮನೆಗೆ ಬರುವ ಅತಿಥಿಗಳು ಕೂಡ ಮಕ್ಕಳಿದ್ದರೆ ಅವರಿಗೆಂದೇ ಸಿಹಿ ತಿನಿಸುಗಳನ್ನು ತರುತ್ತಾರೆ. ಅದರಲ್ಲೂ ಲಾಲಿಪಾಪ್ ಗಳೆಂದ್ರೆ ಮಕ್ಕಳು ಮತ್ತಷ್ಟು ಇಷ್ಟಪಡುತ್ತಾರೆ. ಇನ್ಮುಂದೆ ಮಕ್ಕಳಿಗೆ ಲಾಲಿಪಾಪ್ ಕೊಡುವ ಮುನ್ನ ಪೋಷಕರೇ ಹುಷಾರಾಗಿರಿ.
ಲಾಲಿಪಾಪ್ ಸೇವನೆಯಿಂದ ಬಾಲಕಿಯೊಬ್ಬಳು ಸುಟ್ಟಗಾಯಗಳಿಗೆ ಒಳಗಾಗಿರೋ ಆಘಾತಕಾರಿ ಘಟನೆ ನಡೆದಿದೆ. ಕ್ಯಾಂಡಿ ತಿಂದ ಬಾಲಕಿಯ ನಾಲಗೆ ಸುಟ್ಟುಹೋಗಿದೆ. ಅದರಲ್ಲಿ ಹೆಚ್ಚಿನ ಆಮ್ಲೀಯ ಅಂಶ ಇದ್ದಿದ್ದೇ ಈ ರೀತಿ ಆಗಲು ಕಾರಣ.
ಮಗು ಯಾವ ಕಂಪನಿಯ ಲಾಲಿಪಾಪ್ ಸೇವಿಸಿದೆ ಎಂದು ಹೆಸರಿಸಲಾಗಿಲ್ಲ. ಆದರೆ, ಅದರ ಅಡ್ಡಪರಿಣಾಮಗಳನ್ನು ಸರಿಯಾಗಿ ವಿವರಿಸಲಾಗಿದೆ. ನಿಮ್ಮ ಮಕ್ಕಳಿಗೆ ಏನಾದರೂ ತಿನ್ನಲು ಕೊಡುವ ಮೊದಲು ಸರಿಯಾಗಿ ಪರೀಕ್ಷಿಸಿ ಎಂದು ಮಗುವಿನ ಪೋಷಕರು ಸಲಹೆ ನೀಡಿದ್ದಾರೆ.
4 ವರ್ಷದೊಳಗಿನ ಮಕ್ಕಳು ಹುಳಿ ಮಿಠಾಯಿ ತಿನ್ನಬಾರದು. ಸಿಹಿ ಲಾಲಿಪಾಪ್‌ಗಳು ಅವರ ನಾಲಿಗೆ ಮತ್ತು ಬಾಯಿಯನ್ನು ಸುಡಬಹುದು. ಹೊದಿಕೆಯ ಮೇಲೆ ಆಸಿಡ್ ಲೇಪನವಿರುವುದರಿಂದ ಈ ರೀತಿ ಉಂಟಾಗುತ್ತದೆ ಎಂದು ದಂತವೈದ್ಯರು ಹೇಳಿದ್ದಾರೆ.
ಲಾಲಿಪಾಪ್‌ಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವ ಸಲುವಾಗಿ ತನ್ನ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಬಾಲಕಿ ಹೆಚ್ಚು ಹುಳಿ ಮತ್ತು ಆಮ್ಲೀಯ ಅಂಶವಿರುವ ಲಾಲಿಪಾಪ್ ಅನ್ನು ತಿಂದಿದ್ದಳು. ಇದು ಆಕೆಯ ನಾಲಿಗೆ ಊದಿಕೊಳ್ಳಲು ಮತ್ತು ಸುಡಲು ಕಾರಣವಾಗಿದೆ.