ಮೆಲ್ಬೋರ್ನ್: ಮಕ್ಕಳಿಗೆ ಪೋಷಕರು ಪಾಕೆಟ್ ಮನಿ ನೀಡುವುದು ಸಾಮಾನ್ಯ. ಕೆಲವು ಮಕ್ಕಳು ಈ ಹಣವನ್ನು ತಮಗೆ ಬೇಕಾದುದ್ದಕ್ಕೆ ಖರ್ಚು ಮಾಡಿದ್ರೆ, ಇನ್ನೂ ಕೆಲವು ಮಕ್ಕಳು ಹಣವನ್ನು ಕೂಡಿಡುತ್ತಾರೆ. ಆದರೆ, ಇಲ್ಲೊಂದೆಡೆ ಒಡಹುಟ್ಟಿದ ಪುಟ್ಟ ಮಕ್ಕಳು ಮಾಡಿದ್ದಾದರೂ ಏನು ಗೊತ್ತಾ..? ಖಂಡಿತಾ ನೀವು ಶಾಕ್ ಆಗೋದು ಗ್ಯಾರಂಟಿ..!
ಆಸ್ಟ್ರೇಲಿಯಾ ಮೂಲದ ಆರು ವರ್ಷದ ಬಾಲಕಿ ಮತ್ತು ಒಡಹುಟ್ಟಿದವರು ತಮ್ಮ ಪಾಕೆಟ್ ಮನಿಯಲ್ಲಿ ಮನೆಯನ್ನು ಖರೀದಿಸಿದ್ದಾರೆ. ಈ ಮನೆಗೆ ವೆಚ್ಚವಾಗಿದ್ದು ಬರೋಬ್ಬರಿ 671,000 ಆಸ್ಟ್ರೇಲಿಯನ್ ಡಾಲರ್ ( ಸುಮಾರು ರೂ. 3.6 ಕೋಟಿ)..!
ಉಳಿದ ಇಡ್ಲಿಯಿಂದ ತಯಾರಿಸಿ ಬಿಸಿ ಬಿಸಿ ಇಡ್ಲಿ ಪಕೋಡ
ಆರು ವರ್ಷದ ರೂಬಿ, ಆಕೆಯ ಸಹೋದರ ಗಸ್ ಮತ್ತು ಸಹೋದರಿ ಲೂಸಿ ಮೆಕ್ಲೆಲನ್ ಅವರು ಮೆಲ್ಬೋರ್ನ್‌ನ ಆಗ್ನೇಯದಲ್ಲಿರುವ ಕ್ಲೈಡ್‌ನಲ್ಲಿ ತಮ್ಮ ಸ್ವಂತ ಮನೆಯನ್ನು ಖರೀದಿಸಿದ್ದಾರೆ. ಮಕ್ಕಳ ತಂದೆ ಕ್ಯಾಮ್ ಮೆಕ್ಲೆಲನ್ ಅವರು ಆಸ್ತಿ ಹೂಡಿಕೆ ತಜ್ಞರಾಗಿದ್ದು, ಅವರು ಮನೆ ಖರೀದಿಸಲು ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಮಕ್ಕಳು ಮನೆಕೆಲಸಗಳನ್ನು ಮಾಡುವ ಮೂಲಕ ಮತ್ತು ತಮ್ಮ ತಂದೆಯ ಪರಿಷ್ಕರಿಸಿದ ಹೆಚ್ಚು ಮಾರಾಟವಾದ ಪುಸ್ತಕವನ್ನು ಪ್ಯಾಕ್ ಮಾಡುವ ಮೂಲಕ ಹಣವನ್ನು ಗಳಿಸಿದ್ದಾರೆ. 10 ವರ್ಷಗಳಲ್ಲಿ ಮನೆಯ ಮೌಲ್ಯವು ದ್ವಿಗುಣಗೊಳ್ಳುತ್ತದೆ ಎಂದು ಮಕ್ಕಳ ತಂದೆ ಕ್ಯಾಮ್ ನಿರೀಕ್ಷಿಸಿದ್ದಾರೆ.